

ಟಾಲಿವುಡ್ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ, ಶನಿವಾರವಷ್ಟೇ 65ನೇ ವಸಂತಕ್ಕೆ ಕಾಲಿರಿಸಿ ಆ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಸಿನಿಮಾ ತಂಡಗಳು ಬಗೆಬಗೆ ಪೋಸ್ಟರ್ ಬಿಡುಗಡೆ ಮಾಡಿಕೊಳ್ಳುವ ಮೂಲಕ ಶುಭಾಶಯ ಕೋರಿವೆ. ಅಭಮಾನಿಗಳಂತೂ ಸೋಷಿಯಲ್ ಮೀಡಿಯಾಗಳಲ್ಲಿ ಸಿಡಿಪಿ ರೆಡಿಮಾಡಿಕೊಂಡು, ಚಿರಂಜೀವಿ ಜನ್ಮದಿನವನ್ನು ಹಬ್ಬದಂತೆ ಆಚರಣೆ ಮಾಡಿದ್ದಾರೆ. ಇದೆಲ್ಲದರ ಮಧ್ಯೆ ತುಂಬ ಆಕರ್ಷಿಣೀಯವಾದ ಉಡುಗೊರೆಯೊಂದು ಚಿರು ಮನೆ ತಲುಪಿದೆ.
ಹೌದು, ಟಾಲಿವುಡ್ನ ಇನ್ನೋರ್ವ ಸ್ಟಾರ್ ನಟ ಮೋಹನ್ ಬಾಬು ಚಿರು ಜನ್ಮದಿನದ ಪ್ರಯುಕ್ತ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಕಟ್ಟಿಗೆಯಿಂದಲೇ ತಯಾರಿಸಿದ ಬೈಕ್ವೊಂದನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಿರು, ಮೋಹನ್ ಬಾಬು ಅವರ ಗಿಫ್ಟ್ಗೆ ಧನ್ಯವಾದ ಅರ್ಪಿಸಿದ್ದಾರೆ.
ಅಂದಹಾಗೆ, ಆಚಾರ್ಯ ಚಿತ್ರದಲ್ಲಿ ಖಳನಾಯಕನಾಗಿ ಮೋಹನ್ ಬಾಬು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಚಿರು ವಿರುದ್ಧ ಮೋಹನ್ ಬಾಬು ತೊಡೆ ತಟ್ಟಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. (ಏಜೆನ್ಸೀಸ್)