ಅಪಾಯದಿಂದ ಪಾರು ಮಾಡಿತು ದೊಡ್ಡ ಹೊಟ್ಟೆ...ಅದಿಲ್ಲದಿದ್ದರೆ ಅವನ ಸ್ಥಿತಿ ಗಂಭೀರವಾಗುತ್ತಿತ್ತು !

Belly
Published on

ಮಹಿಳೆಯರಾಗಲಿ...ಪುರುಷರಾಗಲಿ ಹೊಟ್ಟೆಯ ಬೊಜ್ಜಿನಿಂದ ಮುಜುಗರ ಅನುಭವಿಸುತ್ತಾರೆ. ದೊಡ್ಡ ಹೊಟ್ಟೆ ಬಂದರೆ ಅದನ್ನು ಕರಗಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಚೀನಾದ ಈ ವ್ಯಕ್ತಿಯ ಪಾಲಿಗೆ ಆತನ ದೊಡ್ಡ ಹೊಟ್ಟೆಯೇ ಅದೃಷ್ಟ ತಂದಿದೆ.

ಈ ವ್ಯಕ್ತಿಯ ತೂಕ 130 ಕೆಜಿ. ದೊಡ್ಡ ಹೊಟ್ಟೆಯಿತ್ತು. ಅದಕ್ಕಾಗಿ ಅವರಿಗೂ ಸಣ್ಣ ನೋವಿತ್ತು. ಆದರೆ ಬಾವಿಗೆ ಬೀಳುತ್ತಿದ್ದ ಅವರನ್ನು ಹೊಟ್ಟೆಯೇ ಕಾಪಾಡಿದೆ. ಇದನ್ನೂ ಓದಿ: ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್​ ಅವರಿಗೆ ಕೊವಿಡ್​-19 ಸೋಂಕು

ಚೀನಾದ ಹೆನಾನ್​ ಪ್ರಾಂತ್ಯದಲ್ಲಿ. ಲಿಯು ಎಂಬ ಈ ವ್ಯಕ್ತಿಯ ಹೆಸರು 28 ವರ್ಷ. ಹೀಗೆ ಒಂದು ದಿನ ಮನೆಯ ಬಳಿ ಇದ್ದ ಪಾಳು ಬಾವಿಯೊಂದಕ್ಕೆ ಕುಟುಂಬದವರೊಂದಿಗೆ ಸೇರಿ ಮಣ್ಣು, ಮರದ ತುಂಡುಗಳನ್ನು ತುಂಬುವ ಕಾರ್ಯದಲ್ಲಿ ತೊಡಗಿಕೊಂಡಿದ್ದ. ಆಗ ಬಾವಿಯ ಮೇಲೆ ಹಾಕಿದ್ದ ಮರದ ಹಲಗೆಯ ಮೇಲೆ ಸ್ವಲ್ಪ ಜೋರಾಗಿ ಕಾಲಿಡುತ್ತಿದ್ದಂತೆ ಅವನು ಬಾವಿಯೊಳಕ್ಕೆ ಬಿದ್ದ. ಆದರೆ ಬಾವಿಯ ಮೇಲ್ಮೈ ಸ್ವಲ್ಪ ಸಣ್ಣದಾಗಿದ್ದರಿಗೆ ಅವನ ಹೊಟ್ಟೆ ಅಲ್ಲಿ ಸಿಲುಕಿತು. ಪೂರ್ತಿ ಬಾವಿಯೊಳಗೆ ಬೀಳದೆ ಅಪಾಯದಿಂದ ಪಾರಾದ.

ನಂತರ ಅಲ್ಲಿಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಲಿಯು ಅವರ ಸೊಂಟದ ಸುತ್ತ ಒಂದು ಹಗ್ಗವನ್ನು ಕಟ್ಟಿ, ಮೇಲೆತ್ತಿದ್ದಾರೆ. ಬಾವಿಯೊಳಗೆ ಬಿದ್ದಿದ್ದರೆ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ. ಇದೀಗ ಸಣ್ಣಪುಟ್ಟ ಗಾಯ ಆಗಿದ್ದು ಬಿಟ್ಟರೆ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net