7 ಅಡಿ ಎತ್ತರದ ಯುವತಿಗೆ 5ವರೆ ಅಡಿ ಎತ್ತರದ ಯುವಕ ಜೋಡಿ! ಮಗುವಿನ ನೀರಿಕ್ಷೆಯಲ್ಲಿ ದಂಪತಿ tall woman

tall woman
Published on

ಚೀನಾ: ( tall woman )  ಇತ್ತೀಚಿನ ದಿನಗಳಲ್ಲಿ ಚೀನಾದ ದಂಪತಿ.. ಇಬ್ಬರ ನಡುವೆ ಇರುವ ಎತ್ತರದ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ.ಯುವಕ 1.68 ಮೀಟರ್ ಎತ್ತರ (ಅಂದರೆ 5.5 ಅಡಿಗಿಂತ ಸ್ವಲ್ಪ ಹೆಚ್ಚು), ಆದರೆ ಹುಡುಗಿ 2.2 ಮೀಟರ್ ಎತ್ತರ (ಅಂದರೆ ಸುಮಾರು 7.23 ಅಡಿ) ಇರುವ ಈ ಜೋಡಿ ಮಗುವಿನ ನೀರಿಕ್ಷೆಯಲ್ಲಿದ್ದಾರೆ.

ಜಿಹಾವೊ ಮತ್ತು ಕ್ಸಿಯಾಯು ಎಂಬ ದಂಪತಿ ಚಾಂಗ್ಕಿಂಗ್‌ನವರಾಗಿದ್ದು, ಕಳೆದ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಮೇ ತಿಂಗಳ ಮೊದಲ ವಾರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಾನು ಗರ್ಭಿಣಿ ಎಂದು ಘೋಷಿಸುವ ಮೂಲಕ ಈ ವಿಶಿಷ್ಟ ಪ್ರೇಮಕಥೆ ಬೆಳಕಿಗೆ ಬಂದಿತು.

ಮೂರು ವರ್ಷಗಳ ಹಿಂದೆ ನೇರ ಪ್ರಸಾರದ ಸಮಯದಲ್ಲಿ ಜಿಹಾವೊ ಅವರು ಕ್ಸಿಯಾಯು ಅವರನ್ನು ಭೇಟಿಯಾದರು. ನಂತರ ಇಬ್ಬರೂ ಪರಸ್ಪರ ಚಾಟ್ ಮಾಡಲು ಪ್ರಾರಂಭಿಸಿದರು ಈ ಸ್ನೇಹ ಪ್ರೀತಿಗೆ ತಿರುಗಿತು. ನಂತರ ಈ ಜೋಡಿ ಡೇಟಿಂಗ್ ಮಾಡಲು ಪ್ರಾರಂಭಿಸಿತ್ತು ಎನ್ನಲಾಗಿದೆ.

ಜಿಹಾವೊ ಮಾತನಾಡಿ, ತನ್ನ ಗೆಳತಿ ತನಗಿಂತ ತುಂಬಾ ಎತ್ತರವಾಗಿದ್ದರೂ, ಅದು ತನಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಈ ವಿಶಿಷ್ಟ ಸಂಬಂಧದಿಂದಾಗಿ, ಅವರು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಜನರು ಈ ಜೋಡಿ ಹೊಂದಿಕೆಯಾಗುವುದಿಲ್ಲ ಎಂದು ಹೇಳಿ ಟ್ರೋಲ್ ಮಾಡಲು ಪ್ರಾರಂಭಿಸಿದರು ಎಂದಿದ್ದಾರೆ.

ನನ್ನ ಕುಟುಂಬಕ್ಕೆ ಕ್ಸಿಯಾಯು ಇಷ್ಟವಾಯಿತು, ಆದರೆ ನನ್ನ ಎತ್ತರದ ಕಾರಣ ಅವರು ಈ ಸಂಬಂಧವನ್ನು ವಿರೋಧಿಸಿದರು. ಆದರೆ ನಮ್ಮ ಪ್ರೀತಿಯ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇತ್ತು, ಮತ್ತು ನಾವು ಜೀವನಪರ್ಯಂತ ಒಟ್ಟಿಗೆ ಇರಲು ನಿರ್ಧರಿಸಿದೆವು. ನನ್ನ ಹೆಂಡತಿ ಗರ್ಭಿಣಿಯಾಗಿದ್ದಾಳೆ ಮತ್ತು ನಾನು ಅವಳನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕ್ಸಿಯಾಯು ಮಾತನಾಡಿ, ಅತ್ತೆ-ಮಾವಂದಿರನ್ನು ಭೇಟಿಯಾಗಲು ಹೆದರುತ್ತಿದ್ದೇನು. ಏಕೆಂದರೆ ಅವರು ಅವಳನ್ನು ಇಷ್ಟಪಡುವುದಿಲ್ಲ ಎಂದುಕೊಂಡಿದ್ದೇನು.ಈಗ ನಾನು ನನ್ನ ಮಗುವಿಗೆ ತಾಯಿ ಆಗುತ್ತಿದ್ದೇನೆ. ಬಹಳಷ್ಟು ಪ್ರೀತಿಯನ್ನು ನೀಡಲು ಬಯಸುತ್ತೇನೆ" ಎಂದು ಹೇಳಿದಳು.

ಈ ಜೋಡಿಯ ವಿಶಿಷ್ಟ ಪ್ರೇಮಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುವುದನ್ನು ನೋಡಲು ತುಂಬಾ ಸಂತೋಷವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net