

ನವದೆಹಲಿ: ಚೀನಾ ನಿರ್ವಿುತ ಸಿಸಿಟಿವಿಗಳು ಸೇರಿದಂತೆ ಕಣ್ಗಾವಲು ಉಪಕರಣಗಳಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಷೇಧ ಹೇರಲು ಚಿಂತನೆ ನಡೆಸಿದೆ ಎಂಬುದು ಬಹಿರಂಗವಾಗಿದೆ. ಸರ್ಕಾರದ ಈ ನೂತನ ಕಣ್ಗಾವಲು ನೀತಿ ಅ.8ರಂದು ಜಾರಿಗೆ ಬರಲು ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಕಣ್ಗಾವಲು ಉದ್ಯಮದಲ್ಲಿ ಸ್ಥಳೀಯ ಮಾರಾಟಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲಿದೆ. ಇತ್ತೀಚೆಗೆ ಲೆಬನಾನ್ ಮತ್ತು ಸಿರಿಯಾದ ಹಲವೆಡೆ ಸಾವಿರಾರು ಪೇಜರ್ಗಳು ಸ್ಪೋಟಗೊಂಡು ಸಾವು-ನೋವು ಸಂಭವಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ.
ಹೀಗಾಗಿ ಸಿಸಿಟಿವಿ ಕ್ಯಾಮರಾಗಳು ನಿಗದಿತ ಪ್ರಯೋಗಾಲಯಗಳಲ್ಲಿ ತಪಾಸಣೆಗೆ ಒಳಪಟ್ಟು ಪ್ರಮಾಣೀಕರಿಸಲ್ಪಡುವುದು ಕಡ್ಡಾಯ ಆಗಿರಲಿದೆ. ಅಲ್ಲದೆ, ಭಾರತೀಯ ಅಥವಾ ಇತರ ಉತ್ಪಾದಕರಿಂದ ಬಳಸಲ್ಪಡುವ ಮೊದಲು ಕೆಲವು ಪ್ರಮುಖ ಭಾಗಗಳು ನಿಗದಿತ ಏಜೆನ್ಸಿಗಳಿಂದ ಪ್ರಮಾಣೀಕರಿಸಲ್ಪಡಬೇಕಾಗುತ್ತದೆ.
ನಾವು ಪ್ರತಿಕೂಲ ನೆರೆಹೊರೆಯಲ್ಲಿದ್ದು, ವಿದೇಶಿ ಕಂಪನಿಗಳಿಂದ ಟ್ಯಾಪ್ ಮಾಡಬಹುದಾದ ದುರ್ಬಲ ಲಿಂಕ್ಗಳನ್ನು ನಾವು ಬಯಸುವುದಿಲ್ಲ. ಹೀಗಾಗಿ ವಿಶ್ವಾಸಾರ್ಹ ಪೂರೈಕೆ ಸರಪಳಿ ಒದಗಿಸಲು ಈ ಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿಸಿಟಿವಿ ನಿರ್ಬಂಧ ವ್ಯವಸ್ಥೆ ಚಿಲ್ಲರೆ ಮಾರಾಟ ಮಾರುಕಟ್ಟೆಗೆ ವಿಸ್ತರಿಸುವ ಮೊದಲು ಅದನ್ನು ಮೊದಲು ಸರ್ಕಾರಿ ಬಳಕೆಗೆ ಖರೀದಿಯಲ್ಲಿ ಅನುಷ್ಠಾನಗೊಳಿಸಿ ನೋಡಲಾಗಿದೆ. ಇದರಿಂದ ಭಾರತೀಯ ಮಾರಾಟಗಾರರಿಗೆ ಮಾರಾಟದಲ್ಲಿನ ವ್ಯತ್ಯಾಸಕ್ಕೆ ಹೊಂದಿಕೊಳ್ಳಲು ಅನುಕೂಲವಾಗಿದೆ. ಸಿಸಿಟಿವಿ ಬಳಿಕ ಸರ್ಕಾರ ಇದನ್ನು ಇತರ ಸ್ಮಾರ್ಟ್ ಮೀಟರ್ಸ್, ರ್ಪಾಂಗ್ ಸೆನ್ಸರ್ಸ್, ಡ್ರೋನ್ ಪಾರ್ಟ್ಸ್ ಮತ್ತು ಲ್ಯಾಪ್ಟಾಪ್- ಡೆಸ್ಕ್ಟಾಪ್ಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಕ್ಯಾಬಿನ್ ಸಿಬ್ಬಂದಿಗೆ ಹೊಸ ನೀತಿಯನ್ನು ಪರಿಚಯಿಸುತ್ತಿದೆ. ಅಂತಾರಾಷ್ಟ್ರೀಯ ವಿಮಾನಗಳ ಕ್ಯಾಬಿನ್ ಸಿಬ್ಬಂದಿಗೆ ಭತ್ಯೆಗಳನ್ನು 75-125 ಡಾಲರ್ನಿಂದ 85-135ಕ್ಕೆ ಹೆಚ್ಚಿಸಲಾಗುತ್ತದೆ. ದೇಶೀಯ ವಿಮಾನಗಳ ಸಿಬ್ಬಂದಿಗೆ ಭತ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪರಿಷ್ಕೃತ ಸೌಲಭ್ಯಗಳು ಸ್ಪರ್ಧಾತ್ಮಕವಾಗಿ ಮತ್ತು ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಮುಂದುವರಿಯುತ್ತವೆ ಎಂದು ವಕ್ತಾರರು ತಿಳಿಸಿದ್ದಾರೆ. ಕೆಲವು ವಿಭಾಗಗಳ ಸದಸ್ಯರು ಲೇಓವರ್ಗಳ ಸಮಯದಲ್ಲಿ ಕೊಠಡಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.