ಅದ್ಧೂರಿಯಾಗಿ ನಡೆಯಿತ್ತು ಡಿವೋರ್ಸ್ ಪಾರ್ಟಿ; "ಅರೇ.. ಇವರ ಸಂತೋಷಕ್ಕೆ ಪಾರವೇ ಇಲ್ಲ" ಎಂದ್ರು ನೆಟ್ಟಿಗರು!

China Women Organized Party Celebrate End Marriage Congratulations Being Single
Published on

ನವದೆಹಲಿ: ಜೀವನದಲ್ಲಿ ಅತ್ಯಂತ ಮಹತ್ವದ ದಿನದಲ್ಲಿ ಮದುವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅವರು ತಮ್ಮ ಮದುವೆಯನ್ನು ಮರೆಯಲಾಗದ ಕ್ಷಣವನ್ನಾಗಿ ಮಾಡಲು ವಧು, ವರ ಹಾಗೂ ಕುಟುಂಬಸ್ಥರು ಇಷ್ಟ ಪಡುತ್ತಾರೆ.  ಮದುವೆಗೆ ಸ್ನೇಹಿತರು ಮತ್ತು ಸಂಬಂಧಿಕರನ್ನು ಆಹ್ವಾನಿಸಿ ಎಲ್ಲರಿಗೂ ವಿವಿಧ ಖಾದ್ಯಗಳೊಂದಿಗೆ ಭೋಜನದ ವ್ಯವಸ್ಥೆ ಮಾಡಿ ವಿಜೃಂಭಣೆಯಿಂದ ಮಾಡಲಾಗುತ್ತದೆ. ಆದರೆ ಮಹಿಳೆಯೊಬ್ಬರು ಮದುವೆಗಾಗಿ ಅಲ್ಲ ವಿಚ್ಛೆದನಕ್ಕಾಗಿ ಪಾರ್ಟಿ ಮಾಡಿ ಸುದ್ದಿಯಲ್ಲಿದ್ದಾರೆ .

ಚೀನಾದ 34 ವರ್ಷದ ಮಹಿಳೆ ತನ್ನ ವಿಚ್ಛೇದನದ ನಂತರ ಎಲ್ಲರಿಗೂ ಸಂತೋಷವನ್ನು ನೀಡಿದ್ದಾಳೆ. ಆಕೆಯ ಸ್ನೇಹಿತರು ಮತ್ತು ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯನ್ನು ಸ್ಮರಣೀಯವಾಗಿಸಲು ಛಾಯಾಗ್ರಾಹಕರನ್ನು ಸಹ ಆಹ್ವಾನಿಸಲಾಗಿದೆ.  ಈ ಪಾರ್ಟಿಗೆ ಬಂದಿದ್ದವರೆಲ್ಲ ಈ ಚೀನಿ ಯುವತಿಯನ್ನು ಅಭಿನಂದಿಸುತ್ತಿದ್ದರು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಮಹಿಳೆಯ ವಿಚ್ಛೇದನ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. "ಅರೇ.. ಇವರ ಸಂತೋಷಕ್ಕೆ ಪಾರವೇ ಇಲ್ಲ" ಎಂದ್ರು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ವಿಚ್ಛೇದನ ಏಕೆ ಎಂದು ಮಹಿಳೆ ಹೇಳಿದ್ದಾಳೆ? ಮಾಧ್ಯಮ ವರದಿಗಳ ಪ್ರಕಾರ, ಮಹಿಳೆ ತನ್ನ ಪತಿಯ ಫೋನ್‌ನಲ್ಲಿ ಕೆಲವು ಸಂದೇಶಗಳನ್ನು ನೋಡಿದ್ದಾಳೆ. ಅವನು ತನಗೆ ಮೋಸ ಮಾಡುತ್ತಿದ್ದಾನೆ ಎಂದು ಅವಳು ಅನುಮಾನಿಸಿದಳು. ಹೀಗಾಗಿ ಮಹಿಳೆ ವಿಚ್ಛೇದನ ಪಡೆದಿದ್ದಾಳೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net