More

    ಲೋಕಸಭಾ ಕಲಾಪ ವೇಳೆ ಭದ್ರತಾ ಲೋಪ; ಇಬ್ಬರು ವ್ಯಕ್ತಿಗಳನ್ನು ಹಿಡಿದಿದ್ದು ಕಾಂಗ್ರೆಸ್ ಸಂಸದ

    ನವದೆಹಲಿ: ದೇಶದ ಇತಿಹಾಸದಲ್ಲಿ ಅಂತ್ಯಂತ ಭೀಕರ ಘಟನೆ ನಡೆದು ಇಂದಿಗೆ 22 ವರ್ಷಗಳು ಕಳೆದಿವೆ. 2001ರ ಡಿ.13ರಂದು ಸಂಸತ್​ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. ಇದೇ ದಿನ ಇದೀಗ ಇಡೀ ದೇಶ ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಗಿದೆ.

    ನಡೆದಿದ್ದೇನು?: ಇಂದು ಕಲಾಪ ನಡೆಯುತ್ತಿದ್ದಂತೆ ಭದ್ರತೆಯನ್ನು ಉಲ್ಲಂಘಿಸಿದ ಇಬ್ಬರು ವ್ಯಕ್ತಿಗಳು ತಮ್ಮ ಕೈಯಲ್ಲಿ ಹೊಗೆಸೂಸುವ ಡಬ್ಬಿಗಳೊಂದಿಗೆ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದಿದ್ದಾರೆ. ತಕ್ಷಣವೇ ಸದನದಲ್ಲಿ ಹಳದಿ ಹೊಗೆ ಕಾಣಿಸಿಕೊಂಡಿದ್ದು ರಾಜಕಾರಣಿಗಳು ಸದನದಿಂದ ಓಡಿ ಹೋಗಿದ್ದಾರೆ. ಇತ್ತ ಸಂಸತ್​ ಹೊರೆಗ ಇಬ್ಬರೂ  ಬಣ್ಣದ ಹೊಗೆ ಸೂಸುವ ಗ್ಯಾಸ್​​ ಸಿಲಿಂಡರ್​​ ಲೀಕ್​ ಮಾಡಿ ಆತಂಕ ಸೃಷ್ಟಿ ಮಾಡಿದ್ದರು. ಸದನದೊಳಗೆ ನುಗ್ಗಿದ ಆ ಇಬ್ಬರು ಹಾಗೂ ಹೊರಗೆ ಗೊಂದಲ ವಾತಾವರಣ ಸೃಷ್ಟಿ ಮಾಡಿದ್ದ ವ್ಯಕ್ತಿಗಳು ಘೋಷಣೆಗಳನ್ನು ಕೂಗುತ್ತಿದ್ದು,  ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸಿದರು. ಘಟನೆ  ನಂತರ ನಾಲ್ವರನ್ನು ಪೊಲೀಸರು ಅರೆಸ್ಟ್​​ ಮಾಡಿದ್ದಾರೆ.

    ಕಲಾಪದ ವೇಳೆ ಈ ಘಟನೆ ನಡೆದಾಗ ಅಲ್ಲೇ ಇದ್ದ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಮಾತಮಾಡಿದ್ದಾರೆ.  ಇಬ್ಬರು ವ್ಯಕ್ತಿಗಳನ್ನು ಹಿಡಿದ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ, ಅವರ ಕೈಯಲ್ಲಿ ಹಳದಿ ಬಣ್ಣದ ಹೊಗೆ ಹೊರಸೂಸುವ ಏನೋ ಇತ್ತು. ನಾನು ಅದನ್ನು ಕಿತ್ತು ಹೊರಗೆ ಎಸೆದೆ. ಇದು ಪ್ರಮುಖ ಭದ್ರತಾ ಲೋಪವಾಗಿದೆ.

    ದೃಶ್ಯಗಳನ್ನು ನೋಡಿದರೆ ಒಬ್ಬ ವ್ಯಕ್ತಿ, ಕಡು ನೀಲಿ ಬಣ್ಣದ ಶರ್ಟ್ ಧರಿಸಿದ್ದು ಡೆಸ್ಕ್‌ಗಳ ಮೇಲೆ ಜಿಗಿಯುತ್ತಿರುವುದು ಮತ್ತು ಆದರೆ ಎರಡನೆಯವ ಸಂದರ್ಶಕರ ಗ್ಯಾಲರಿಯಲ್ಲಿ ಹೊಗೆಯನ್ನು ಸಿಂಪಡಿಸುತ್ತಿರುವುದು ಕಾಣುತ್ತದೆ. ಇಬ್ಬರನ್ನೂ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಹಿಡಿದಿದ್ದಾರೆ.

    ಸಂಸತ್​ ಸದನದಲ್ಲಿ ಭಾರಿ ಭದ್ರತಾ ಲೋಪ: 4 ಮಂದಿ 2 ಘಟನೆ, ಮೈಸೂರಿಗೂ ಇದೆ ಲಿಂಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts