ಕೊರೊನಾ ವೈರಸ್​ ಪರೀಕ್ಷೆಗೆ ಚೀನಾದಲ್ಲಿ 15 ನಿಮಿಷ, ಭಾರತದಲ್ಲಿ ಒಂದು ದಿನ! ಕಾರಣವೇನು ಗೊತ್ತಾ?

corona test
Published on

ನವದೆಹಲಿ: ಚೀನಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್​ ಭಾರತಕ್ಕೂ ಕಾಲಿಟ್ಟಿದೆ. ಚೀನಾದಲ್ಲಿ ವೈರಸ್​ ಸೋಂಕಿತರು ಎಂದು ಶಂಕಿಸಲಾದಂತಹ ವ್ಯಕ್ತಿಗಳ ತಪಾಸಣೆ ನಡೆಸಿ ಅವರಲ್ಲಿ ವೈರಸ್​ ಇದಿಯೋ ಇಲ್ಲವೋ ಎನ್ನುವುದನ್ನು ಕೇವಲ 15 ನಿಮಿಷಗಳಲ್ಲಿ ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಸೋಂಕನ್ನು ಧೃಡ ಪಡಿಸುವುದಕ್ಕೆ 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಾಗುತ್ತದೆ.

ಕೊರೊನಾ ದಾಳಿ ಅತಿ ಹೆಚ್ಚು ಪ್ರಮಾಣದಲ್ಲಿ ಆಗಿರುವ ಚೀನಾದಲ್ಲಿ ಶಂಕಿತರ ರಕ್ತ ಪರೀಕ್ಷೆಗೆ ರ‍್ಯಾಪಿಡ್​ ಪರೀಕ್ಷೆಯನ್ನು ಅನುಸರಿಸುತ್ತದೆ. ಈ ಪರೀಕ್ಷೆಯಲ್ಲಿ ಬರುವ ರಿಪೋರ್ಟ್​ ಶೇ.80 ಸತ್ಯವಾಗಿರುತ್ತದೆ ಎನ್ನಲಾಗಿದೆ. ಆದರೆ ಭಾರತದಲ್ಲಿ ಶಂಕಿತರ ರಕ್ತ ಪರೀಕ್ಷೆಗೆ ರಿಸರ್ವ್​ ಟ್ರಾನ್ಸ್ಕ್ರಿಪ್ಷನ್​ ಪಾಲಿಮರೇಸ್​ ಚೈಐನ್​ ರಿಯಾಕ್ಷನ್​ (RT-PCR) ಎನ್ನುವ ವಿಧವನ್ನು ಅನುಸರಿಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಲಿಮರೇಸ್​ ಚೈನ್​ ರಿಯಾಕ್ಷನ್​ ಎಂಬ ಜೀನ್​ ಆಧಾರಿತ ಮೌಲ್ಯಮಾಪನ ಮಾಡಲಾಗುತ್ತದೆ. ಅದರ ಮುಂದುವರೆದ ಭಾಗವಾಗಿ ರಿವರ್ಸ್​ ಟ್ರಾನ್ಸ್ಕ್ರಿಪ್ಷನ್​ ಚೈನ್​ ರಿಯಾಕ್ಷನ್​ ಮಾಡುವುದರಿಂದಾಗಿ ಕೊರೊನಾ ಇದೆಯೋ ಇಲ್ಲವೋ ಎನ್ನುವುದು ನಿಖರವಾಗಿ ತಿಳಿದುಬರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಅನುಸಾರ ಕೊರೊನಾ ವೈರಸ್​ ಪತ್ತೆ ಹಚ್ಚುವುದಕ್ಕೆ RT-PCR ಅಥವಾ ರಕ್ತ ಮಾದರಿಯ ಜೀನ್​ಗಳ ಮೌಲ್ಯಮಾಪನವೇ ಸೂಕ್ತ ಕ್ರಮವಾಗಿದೆ. ಹಾಗಾಗಿ ಅನೇಕ ದೇಶಗಳು ರ‍್ಯಾಪಿಡ್ಬ ವಿಧವನ್ನು ಅನುಸರಿಸದೆ RT-PCR ಮೂಲಕ ಕೊರೊನಾ ಪತ್ತೆ ಮಾಡುತ್ತಿವೆ.

ಭಾರತದ ಪುಣೆಯಲ್ಲಿರುವ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ವೈರಾಲಜಿಯ ಅಧಿಕಾರಿಗಳು ಹಗಲು ರಾತ್ರಿಯೆನ್ನದೆ ಈ ಪರೀಕ್ಷೆಯಲ್ಲಿ ನಿರತರಾಗಿದ್ದಾರೆ.

ಚೀನಾದಲ್ಲಿ ಅನುಸರಿಸಲಾಗುತ್ತಿರುವ ರ‍್ಯಾಪಿಡ್​ ಪರೀಕ್ಷೆಯನ್ನು ಇಟಲಿ, ಜಪಾನ್​ ದೇಶಗಳಲ್ಲಿಯೂ ಸಹ ಅನುಸರಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net