

ಪಾಕಿಸ್ತಾನಕ್ಕೆ ಮಿತ್ರ ರಾಷ್ಟ್ರ ಚೀನಾ ಮಾಸ್ಕ್, ಸ್ಯಾನಿಟೈಸರ್ ಸೇರಿ ಹಲವು ವೈದ್ಯಕೀಯ ನೆರವುಗಳನ್ನು ಕಳುಹಿಸಿದೆ. ಆದರೆ ಚೀನಾದಿಂದ ಬಂದಿಳಿದ ಸರಕುಗಳನ್ನು ನೋಡಿ ಪಾಕ್ ಆಶ್ಚರ್ಯಚಕಿತವಾಗಿದೆ.
ಏಕೆಂದರೆ ಚೀನಾ ಎನ್-95 ಮಾಸ್ಕ್ಗಳ ಬದಲಾಗಿ ಒಳಉಡುಪುಗಳಿಂದ (ಅಂಡರ್ವೇರ್) ತಯಾರಿಸಿದ ಮಾಸ್ಕ್ಗಳನ್ನು ರವಾನಿಸಿದೆ! ಅಲ್ಲಿನ ಅಧಿಕಾರಿಗಳು ಅವುಗಳನ್ನು ಪರಿಶೀಲಿಸದೆ ಸಿಂಧ್ ಪ್ರಾಂತ್ಯದ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಪಾಕ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ
ಪಾಕಿಸ್ತಾನದಲ್ಲಿ ಕರೊನಾ ಸೋಂಕಿಗೆ ಒಳಗಾಗಿರುವವ ಸಂಖ್ಯೆ 2700ರ ಗಡಿ ದಾಟಿದ್ದು, ಈವರೆಗೆ 41 ಜನರು ಸಾವನ್ನಪ್ಪಿದ್ದಾರೆ. ಪಾಕ್ನ ಶೇಕಡಾ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಪಂಜಾಬ್ ಪ್ರಾಂತ್ಯವೊಂದರಲ್ಲೇ 1,072 ಪ್ರಕರಣಗಳು ವರದಿಯಾಗಿದ್ದು, ಇದು ಪಾಕ್ನಲ್ಲಿ ಕರೊನಾ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ನಂತರದ ಸ್ಥಾನಗಳಲ್ಲಿ ಸಿಂಧ್-839, ಬಲೂಚಿಸ್ತಾನ-175, ಗಿಲ್ಗಿಟ್ ಬಾಲ್ಟಿಸ್ತಾನ-193, ಇಸ್ಲಾಮಾಬಾದ್ 75 ಹಾಗೂ ಪಿಒಕೆಯಲ್ಲಿ 11 ಸೋಂಕು ಪ್ರಕರಣಗಳು ವರದಿಯಾಗಿವೆ.
ಜುಲೈ ಸಮಯದಲ್ಲಿ ನಡೆಯುವ ಮೆಕ್ಕಾ-ಮದಿನಾ ಹಜ್ ಯಾತ್ರೆ 222 ವರ್ಷಗಳ ಬಳಿಕ ಮೊದಲ ಬಾರಿ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ 1798ರಲ್ಲಿ ಒಮ್ಮೆ ಹಜ್ ಯಾತ್ರೆಯನ್ನು ರದ್ದುಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಕರೊನಾ ವೈರಸ್ ಚೀನಾದಲ್ಲಿ ಹುಟ್ಟಿದ್ದರೂ ಅದನ್ನು ಜಗತ್ತಿಗೆ ಪಸರಿಸಿದ್ದು ಇಟಲಿ ಎಂದು ವರದಿಯೊಂದು ತಿಳಿಸಿದೆ. ಇಟಲಿಯಲ್ಲಿ ವೈರಸ್ ಪ್ರಕರಣಗಳು ಹೆಚ್ಚಾದರೂ ಅಲ್ಲಿನ ಸರ್ಕಾರ ವಿಮಾನಯಾನದ ಮೇಲೆ ನಿರ್ಬಂಧ ವಿಧಿಸದಿರುವುದು ಇದಕ್ಕೆ ಪ್ರಮುಖ ಕಾರಣ.