

ಬೀಜಿಂಗ್: ಇಡೀ ಜಗತ್ತಿಗೆ ಕೋವಿಡ್ 19 ಸೋಂಕು ಹಬ್ಬಿಸಿದ ಚೀನಾದಲ್ಲಿ ಇದೀಗ ಮತ್ತೊಂದು ಸುತ್ತಿನ ಸೋಂಕಿನ ಸಮಸ್ಯೆ ಆರಂಭವಾಗಿದೆ. ವಿದೇಶದಲ್ಲಿ ನೆಲೆಸಿದ್ದು ಇದೀಗ ಸ್ವದೇಶಕ್ಕೆ ಮರಳಿರುವ ಚೀನಿಯರಿಂದಾಗಿ ಸೋಂಕು ಮತ್ತೆ ಹಬ್ಬಲಾರಂಭಿಸಿದೆ. ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 6 ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಶನಿವಾರ 99 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಭಾನುವಾರದಂದು ಹೊಸದಾಗಿ 108 ಜನರಲ್ಲಿ ಸೋಂಕು ಖಚಿತಪಟ್ಟಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಮಾರ್ಚ್ 5ರಂದು ಒಂದೇ ದಿನ 143 ಜನರಲ್ಲಿ ಸೋಂಕು ದೃಢಪಟ್ಟಿದ್ದು ಇದುವರೆಗಿನ ಗರಿಷ್ಠವಾಗಿದೆ.
ಭಾನುವಾರದ ಸೋಂಕಿತರ ಹೆಚ್ಚಳದೊಂದಿಗೆ ಚೀನಾದಲ್ಲಿ ಸೋಂಕುಪೀಡಿತರ ಸಂಖ್ಯೆ ಒಟ್ಟು 82,160ಕ್ಕೆ ಏರಿಕೆಯಾಗಿದ್ದು, 3,341 ಜನರು ಅಸುನೀಗಿದ್ದಾರೆ.