ಚೀನಾ ಲೋನ್​ ಆ್ಯಪ್​ ಹಗರಣ; 7 ಕಂಪನಿಗಳ ಆಸ್ತಿ ಜಪ್ತಿ, 76.67 ಕೋಟಿ ರೂ ವಶಕ್ಕೆ

Money
Published on

ಬೆಂಗಳೂರು; ಸುಲಭದಲ್ಲಿ ಸಾಲ ನೀಡುವುದಾಗಿ ಹೇಳಿ ಜನರಿಗೆ ಕಿರುಕುಳ ನೀಡುತ್ತಿದ್ದ ಚೀನಾ ಲೋನ್​ ಆ್ಯಪ್​ ಕಂಪನಿ ಮತ್ತು ಸ್ಥಳಿಯ ಸಹಭಾಗಿ ಕಂಪನಿಗಳಿಗೆ ಸೇರಿದ 76.67 ಕೋಟಿ ರೂ. ಮೌಲ್ಯ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.

ಕರೊನಾ ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡವರನ್ನೇ ಟಾರ್ಗೆಟ್​ ಮಾಡಿ ಆ್ಯಪ್​ನಲ್ಲಿ ಸುಲಭವಾಗಿ ಸಾಲ ಕೊಡುವ ಕಂಪನಿಗಳನ್ನು ಚೀನಾ ಉದ್ಯಮಿಗಳು ತೆರೆದಿದ್ದರು. ಕೇವಲ ಮೊಬೈಲ್​ನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಸಿ ಒಟಿಪಿ ನಂಬರ್​ ಪಡೆದು 5,000 ರಿಂದ 50 ಸಾವಿರ ರೂ. ವರೆಗಿನ ಸಾಲ ಕೊಡುತ್ತಿದ್ದರು.

ಮೊಬೈಲ್​ನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಸುವ ಡೇಟಾ ಕಳವು ಮಾಡುತ್ತಿದ್ದರು. ಆನಂತರ ಸಾಲಗಾರನಿಂದ ಹೆಚ್ಚಿನ ಅಸಲು ಮತ್ತು ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದರು. ಕೊಡದೆ ಇದ್ದರೇ ಈ ಮೊದಲೇ ಸಾಲಗಾರ ಮೊಬೈಲ್​ನಲ್ಲಿ ಕಳವು ಮಾಡಿದ್ದ ಸ್ನೇಹಿತರ ಮತ್ತು ಆಪ್ತರಿಗೆ ವಾಟ್ಸ್​ಆ್ಯಪ್​ ಮಾಡಿ ಮರ್ಯಾದೆ ತೆಗೆಯುವ ಮೂಲಕ ಕಿರುಕುಳ ನೀಡುತ್ತಿದ್ದರು.

ರಿಸರ್ವ್​ ಬ್ಯಾಂಕ್​ ಆ್​ ಇಂಡಿಯಾದ ಮಾರ್ಗಸೂಚಿ ಪಾಲನೆ ಮಾಡುತ್ತಿರಲಿಲ್ಲ. ಸಾಲಗಾರರು ಭಯಕ್ಕೆ ಹಲವರು ಹೆಚ್ಚಿನ ಬಡ್ಡಿಯೂ ಪಾವತಿ ಮಾಡಿದ್ದರು. ತಮಿಳುನಾಡಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಸಹ ಮಾಡಿಕೊಂಡಿದ್ದ.

ದಕ್ಷಿಣ ಭಾರತದಲ್ಲಿ ಪ್ರಕರಣ ಗಂಭೀರತೆ ಪಡೆದು ರಾಜ್ಯದಲ್ಲಿಯೂ ಹಲವು ಪ್ರಕರಣಗಳು ದಾಖಲಾಗಿದ್ದವು. ಹೆಚ್ಚಿನ ತನಿಖೆ ಕೈಗೊಂಡ ಸಿಐಡಿ ಪೊಲೀಸರು, ನೊಂದ ಸಾಲಗಾರರಿಂದ ಹಲವು ದೂರುಗಳನ್ನು ಸ್ವೀಕರಿಸಿದ್ದರು. ಚೀನಾದ 7 ಕಂಪನಿಗಳನ್ನು ಪತ್ತೆ ಮಾಡಿ ಸ್ಥಳಿಯ ಸಹಭಾಗಿ ಕಂಪನಿಗಳ ವಿರುದ್ಧವೂ ಕ್ರಮ ತೆಗೆದುಕೊಂಡಿದ್ದರು. ಎಲ್ಲ ಕಂಪನಿಗಳ ಕಚೇರಿ ಮತ್ತು ಬ್ಯಾಂಕ್​ ಖಾತೆಗಳನ್ನು ಜಪ್ತಿ ಮಾಡಿ ಇಡಿ ಇಲಾಖೆಗೆ ವರದಿ ಒಪ್ಪಿಸಿದ್ದರು. ಈ ಮೇರೆಗೆ ಆರೋಪಿತ ಚೀನಾದ 7 ಕಂಪನಿ ಮತ್ತು ಸ್ಥಳಿಯ ಸಹಭಾಗಿ ಕಂಪನಿಗಳ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net