More

    ಜಿ7 ಶೃಂಗಸಭೆ ಪ್ರವಾಸವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ; ದೇಶದಲ್ಲಿ ಉಂಟಾಗಿರುವ ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜಿ7 ಶೃಂಗಸಭೆ ಪ್ರವಾಸವನ್ನು ರದ್ದು ಮಾಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಜೂನ್ 11 ರಿಂದ 13 ರವರೆಗೆ ಇಂಗ್ಲೆಂಡ್ ನಲ್ಲಿ ಜಿ 7 ಶೃಂಗಸಭೆ ಆಯೋಜನೆಗೊಂಡಿತ್ತು. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತದ ಪ್ರಧಾನಿ ಸೇರಿದಂತೆ ದಕ್ಷಿಣ ಆಫ್ರಿಕಾ, ಸೌತ್ ಕೊರಿಯಾ, ಆಸ್ಟ್ರೇಲಿಯಾ ದೇಶಗಳ ಪ್ರಧಾನಿಗಳಿಗೆ ಆಹ್ವಾನ ನೀಡಿದ್ದರು.

    ಮೇ 8 ರಂದು ಪೋರ್ಚುಗಲ್ ನಲ್ಲಿ ನಡೆಯಬೇಕಿದ್ದ ಇಯು ಸಮ್ಮೇಳನವನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಿದ್ದರು. ವರ್ಚುವಲ್ ಮೂಲಕ ಜಿ7 ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದಾಗಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಎರಡು ಬಾರಿ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

    ಇದನ್ನೂ ಓದಿ; ಸಸ್ಯ ಜನಿಸಿ 33 ಕೋಟಿ ವರ್ಷವಾದರೂ ಬಿಟ್ಟಿರಲಿಲ್ಲ ಹೂವು! ಯಾರಿಗೂ ತಿಳಿಯದ ವಿಚಾರಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts