FACT CHECK |ಚೀನಾ ರಾಕೆಟ್​ ದಾಳಿ ನಡೆಸಿ 158 ಮಂದಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿರುವುದು ಸುಳ್ಳು ಸುದ್ದಿ

rocke
Published on

ನವದೆಹಲಿ: ಚೀನಾ ಹಾಗೂ ಭಾರತ ಗಡಿ ನಡುವೆ ಉದ್ವಿಗ್ನ ವಾತಾವರಣ ಮೂಡಿರುವ ವೇಳೆ ಸಾಮಾಜಿಕ ಜಾಲತಾಣದಲ್ಲಿ ಚೀನಾ ರಾಕೆಟ್​ ದಾಳಿ ನಡೆಸಿ 158 ಮಂದಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಸೈನಿಕರನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಚೀನಾ ನಡೆಸಿದ ರಾಕೆಟ್​ ದಾಳಿಯಿಂದ ಬೆಂಕಿ ತಗುಲಿರುವ ಫೋಟೋಗಳನ್ನು ಅಪ್​ಲೋಡ್​ ಮಾಡಿ ಅದಕ್ಕೆ ಚೀನಾ ನಡೆಸಿದ ರಾಕೆಟ್​ ದಾಳಿಯಿಂದ 158 ಮಂದಿ ಭಾರತೀಯರ ಸೈನಿಕರು ಮೃತಪಟ್ಟಿದ್ದಾರೆ ಎಂದು ಶೀರ್ಷಿಕೆ ಬರೆಯಲಾಗಿದೆ.

ಈ ಪೋಸ್ಟ್​ ಫೇಸ್​ಬುಕ್​, ಟ್ವಿಟರ್​ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವು ಫೇಸ್​ಬುಕ್​ ಬಳಕೆದಾರರು ಈ ಫೋಟೋವನ್ನು ಹಂಚಿಕೆ ಮಾಡಿದ್ದಾರೆ. ಆದರೆ ಈ ಪೋಸ್ಟ್​ ನಕಲಿ ಎಂಬುದು ಫ್ಯಾಕ್ಟ್​ಚೆಕ್​ನಿಂದ ಪತ್ತೆಯಾಗಿದೆ.

ಅರುಣಾಚಲ ಪ್ರದೇಶದ ತವಾಂಗ್‌ ಸೇನಾ ಶಿಬಿರದಲ್ಲಿ 2017ರಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿ ಭಾರತೀಯ ಸೇನಾ ವಾಹನಕ್ಕೆ ಬೆಂಕಿ ತುಗಲಿತ್ತು. ಇದೇ ಸಮಯದಲ್ಲಿ ಚೀನಾ ಹಾಗೂ ಭಾರತ ನಡುವೆ ಡೋಕ್ಲಾಮ್ ವಿವಾದ ಉಂಟಾಗಿತ್ತು. ಈ ವೇಳೆ ಚೀನಾ ಹಾಗೂ ಪಾಕಿಸ್ತಾನ ಮಾಧ್ಯಮಗಳು ಭಾರತದ ಸೇನೆ ಮೇಲೆ ದಾಳಿ ನಡೆಸಿ 150 ಸೈನಿಕರನ್ನು ಕೊಲ್ಲಾಗಿದೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದವು. ಈಗ ಫೋಟೋ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ತಿಳಿದು ಬಂದಿದೆ.

ಭಾರತೀಯ ಸೇನೆ ಕೂಡ ಚೀನಾ ನಮ್ಮ ಸೈನಿಕರ ಮೇಲೆ ರಾಕೆಟ್​ ದಾಳಿ ನಡೆಸಿಲ್ಲ. ಅಲ್ಲದೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ವೈರಲ್​ ಆಗಿರುವ ಪೋಟೋ ನಕಲಿ ಎಂಬುದು ಪತ್ತೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net