ಚಿನ್ನದ ಎಟಿಎಂ: ಚಿನ್ನದ ಆಭರಣಗಳನ್ನು ಸೆಕೆಂಡುಗಳಲ್ಲಿ ಕರಗಿಸಿ ನಗದು ರೂಪದಲ್ಲಿ ನೀಡುವ ಯಂತ್ರ..  gold atm

gold atm
Published on
ಹಣಕಾಸಿನ ಕೊರತೆಯಿದ್ದರೆ, ಚಿನ್ನವನ್ನು ಗಿರವಿ ಇಡಲು ಅಥವಾ ಮಾರಾಟ ಮಾಡಲು ಬ್ಯಾಂಕುಗಳು ಅಥವಾ ಗಿರವಿ ಅಂಗಡಿಗಳತ್ತ ಮುಖ ಮಾಡುತ್ತಾರೆ. ಆದರೆ ಚೀನಾದಲ್ಲಿ ಬೇರೆಯದೇ ಆದ ಪದ್ಧತಿ ಅನುಸರಿಸಲಾಗುತ್ತಿದೆ. ಇನೀವು ಚಿನ್ನದ ಬದಲಿಗೆ ಹಣವನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವೀಡಿಯೊಗಳು ಅಂತರ್ಜಾಲದಲ್ಲಿ  ವೈರಲ್ ಆಗುತ್ತಿವೆ. ಈ ಚಿನ್ನದ ಮಷಿನ್​ ಚೀನಾದಲ್ಲಿದೆ ಎನ್ನಲಾಗಿದೆ.
ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಮಹಿಳೆಯೊಬ್ಬರು ಎಟಿಎಂನಂತೆ ಕಾಣುವ ಯಂತ್ರಕ್ಕೆ ಕೆಲವು ಚಿನ್ನದ ಆಭರಣಗಳನ್ನು ಹಾಕುತ್ತಿರುವುದನ್ನು ಕಾಣಬಹುದು. ಯಂತ್ರವು ತಕ್ಷಣವೇ ಚಿನ್ನದ ತೂಕವನ್ನು ಅಂದಾಜು ಮಾಡುತ್ತದೆ. ನಂತರ ಪರದೆಯು ಆ ತೂಕದ ಆಧಾರದ ಮೇಲೆ ಎಷ್ಟು ಹಣವನ್ನು ಪಡೆಯಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ನಂತರ ಅವರ ಆಭರಣದ ತೂಕ ಹಾಗೂ ಇಂದಿನ ಬೆಲೆಗೆ ತಕ್ಕಂತೆ ಲೆಕ್ಕ ಹಾಕಿ ಹಣವನ್ನು ನೀಡುತ್ತದೆ. ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿತು.
ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ  ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಕೆಲವರು ನಂಬುವುದು ಹೇಗೆ?  ಎಂದು ಕಾಮೆಂಟ್​​ ಮಾಡಿದ್ದಾರೆ. ಒಟ್ಟಾರೆಯಾಗಿ ಈ ವಿಡಿಯೋ ಕುರಿತಾಗಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net