'ಹುಟ್ಟಿದ್ದು ನಮ್ಮಲ್ಲಲ್ಲ...ಎಚ್ಚರಿಸಿದ್ದು ನಾವು' ಚೀನಾದ ಹೊಸ ರಗಳೆ

China 9 10
Published on

ವುಹಾನ್​: ಇಡೀ ವಿಶ್ವಕ್ಕೆ ಕರೊನಾ ಸೋಂಕು ಹರಡಿ ಒಂದು ವರ್ಷವಾಗುತ್ತ ಬಂತು. ಕೊವಿಡ್​-19 ಮೊದಲು ಪ್ರಾರಂಭವಾಗಿದ್ದು ಚೀನಾದ ವುಹಾನ್​ನಲ್ಲಿ ಎಂಬುದು ಜಗಜ್ಜಾಹೀರಾದ ಸತ್ಯ.

ಆದರೆ ಇದೀಗ ಚೀನ ಹೊಸ ರಗಳೆ ತೆಗೆದಿದೆ. ಕರೊನಾ ಹುಟ್ಟಿದ್ದು ನಮ್ಮಲ್ಲಿ ಮೊದಲು ಅಲ್ವೇ ಅಲ್ಲ..ವುಹಾನ್​ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ಜಗತ್ತಿನ ಬೇರೆಬೇರೆ ದೇಶ, ರಾಜ್ಯಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ.

ಕರೊನಾ ಚೀನಾದಲ್ಲಿ ಪತ್ತೆಯಾಗುವುದಕ್ಕೂ ಮೊದಲೇ ಜಗತ್ತಿನ ಬೇರೆಬೇರೆ ಕೆಲವು ದೇಶದಲ್ಲಿ ಹುಟ್ಟಿತ್ತು. ಆದರೆ ವೈರಸ್​ ಬಗ್ಗೆ ಎಚ್ಚರಿಸಿದ್ದು ಚೀನಾ. ಹಾಗಾಗಿ ನಮ್ಮಲ್ಲೇ ಮೊದಲು ಹುಟ್ಟಿದ್ದು ಎಂದು ವರದಿಯಾಗಿದೆ ಎಂದು ಇಂದು ಹೇಳಿಕೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ನಾಳೆ ಸಂಜನಾ ಬರ್ತ್‌ಡೇ: ಜೈಲಿನಲ್ಲೇ ಕೇಕ್ ಕಟ್ ಮಾಡುತ್ತಾರಾ ಮಾದಕ ನಟಿ?

ಈ ಮೂಲಕ ಜಗತ್ತಿಗೇ ಕರೊನಾ ಹಬ್ಬಿಸಿದ್ದು ಚೀನಾ ಎಂಬ ಆಪಾದನೆಯಿಂದ ಹೊರಬರಲು ಆ ದೇಶ ಮುಂದಾಗಿದೆ. ಕರೊನಾ ವೈರಸ್​ ಕಾಣಿಸಿಕೊಂಡಿದ್ದು ಚೀನಾದ ವುಹಾನ್‌ನಲ್ಲಿರುವ ಜೈವಿಕ ಪ್ರಯೋಗಾಲಯದಲ್ಲಿ ಎಂಬ ಗಂಭೀರ ಆರೋಪವನ್ನು ಅಮೆರಿಕ ಮಾಡಿತ್ತು. ಅದನ್ನೂ ಕೂಡ ಚೀನಾ ಖಡಾಖಂಡಿತವಾಗಿ ನಿರಾಕರಿಸಿದೆ.

ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಹುವಾ ಚುನೈಂಗ್ ಅವರು ಇಂದು ಮಾಧ್ಯಮ ಗೋಷ್ಠಿಯಲ್ಲಿ ಈ ರೀತಿ ಪ್ರತಿಪಾದಿಸಿದ್ದಾರೆ. ಕರೊನಾ ಸೋಂಕು ಹುಟ್ಟಿಸಿದ್ದು ನಾವಲ್ಲ...ಬದಲಿಗೆ ಎಚ್ಚರಿಸಿದ್ದು ನಾವು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net