ಮಕ್ಕಳಾಗಿಲ್ಲ ಎಂದು ಹೋಗ್ತಿದ್ದವರಿಗೆ ಕದ್ದು ತನ್ನದೇ ವೀರ್ಯ ಕೊಡುತ್ತಿದ್ದ ಈ ವೈದ್ಯ 17 ಮಕ್ಕಳ ಅಪ್ಪ !

IVF
Published on

ಕೃತಕ ಗರ್ಭಧಾರಣೆ ತಜ್ಞ ಬರೋಬ್ಬರಿ 17 ಮಕ್ಕಳಿಗೆ ಅಪ್ಪನಾಗಿದ್ದಾನೆ. ಇದೊಂದು ದೊಡ್ಡ ಐವಿಎಫ್​ ಹಗರಣ ಎನಿಸಿಕೊಂಡಿದೆ.

ಮಕ್ಕಳಾಗದ ದಂಪತಿ ಐವಿಎಫ್​ ಮೂಲಕ ಮಕ್ಕಳನ್ನು ಪಡೆಯಲು ಈ ತಜ್ಞನ ಬಳಿ ಬಂದರೆ ಆತನ ದಾನಿಗಳು ನೀಡುವ ವೀರ್ಯದ ಬದಲಿಗೆ, ತನ್ನದೇ ವೀರ್ಯವನ್ನು ಮಹಿಳೆಯರಿಗೆ ನೀಡುತ್ತಿದ್ದ. ಆದರೆ ಈ ವಿಚಾರ ದಂಪತಿಯ ಗಮನಕ್ಕೆ ಬರುತ್ತಿರಲಿಲ್ಲ. ಕದ್ದುಮುಚ್ಚಿ ಈ ಕೆಲಸ ಮಾಡುತ್ತಿದ್ದ.  ಸದ್ಯ ಒಟ್ಟು 17 ಮಕ್ಕಳಿಗೆ ಈ ವ್ಯದ್ಯನೇ ತಂದೆ ಎಂಬುದು ಈಗ ಬೆಳಕಿಗೆ ಬಂದಿದೆ. ಅದರಾಚೆ ಇನ್ನೆಷ್ಟು ಜನರಿಗೆ ವೀರ್ಯ ಕೊಟ್ಟು ಯಾಮಾರಿಸಿದ್ದಾನೋ ಇನ್ನೂ ಗೊತ್ತಾಗಬೇಕಿದೆ.

ನೆದರ್​ಲ್ಯಾಂಡ್​ನ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಮಂಗಳವಾರ ಈ ವಿಚಾರವನ್ನು ಆಸ್ಪತ್ರೆ ಬಹಿರಂಗಪಡಿಸಿದೆ. ​ ಜಾನ್ ವೈಲ್ಡ್ಸ್‌ಚಟ್ ಎಂಬ ಸ್ತ್ರೀರೋಗ ತಜ್ಞನ ಕರ್ಮಕಾಂಡ ಇದು. ಈಗ ಆತ ಬದುಕಿಲ್ಲ. 1981ರಿಂದ 1993ರವರೆಗೆ ಜ್ವಾಲ್ಲೆ ಸಿಟಿಯಲ್ಲಿರುವ ಸೋಪಿಯಾ ಆಸ್ಪತ್ರೆ (ಈಗಿನ ಇಸಾಲಾ ಆಸ್ಪತ್ರೆ) ಎಂಬಲ್ಲಿ ಈ ವೈದ್ಯ ಕೆಲಸ ಮಾಡಿದ್ದ.  ಇದನ್ನೂ ಓದಿ: 9ನೇ ಕ್ಲಾಸ್‌ ಹುಡುಗ ಕಿಡ್‌ನ್ಯಾಪ್‌: ‘ಅಪಹರಣಕಾರ’ರನ್ನು ನೋಡಿದ ಪಾಲಕರು, ಪೊಲೀಸರು ಕಕ್ಕಾಬಿಕ್ಕಿ!

ಕಳೆದ ವರ್ಷ ಈ ವಿಚಾರ ಆಸ್ಪತ್ರೆಯ ಗಮನಕ್ಕೆ ಬಂದಾಗ ​ಜಾನ್ ವೈಲ್ಡ್ಸ್‌ಚಟ್ ಕೃತಕ ಗರ್ಭಧಾರಣೆ ಮಾಡಿಸಿದ್ದ ಮಕ್ಕಳನ್ನು ಡಿಎನ್​ಎ ಟೆಸ್ಟ್​ಗೆ ಒಳಪಡಿಸಲಾಗಿತ್ತು. ನಂತರ ಅದರ ವರದಿಯಲ್ಲೂ ಸತ್ಯ ತಿಳಿದುಬಂದಿದೆ. ಆದರೆ ನೈತಿಕ ದೃಷ್ಟಿಕೋನದಿಂದ ನೋಡಿದಾಗ ಸ್ತ್ರೀರೋಗ ತಜ್ಞನೇ ವೀರ್ಯದಾನಿಯೂ ಆಗಿದ್ದರು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಇಸಾಲಾ ತಿಳಿಸಿದೆ.

ಇಂಥ ಪ್ರಕರಣ ಮೊದಲ ಬಾರಿ ನಡೆದಿದ್ದಲ್ಲ..ಈ ಹಿಂದೆಯೂ ವೈದ್ಯನೋರ್ವ 49 ಮಹಿಳೆಯರಿಗೆ ತನ್ನದೇ ವೀರ್ಯ ನೀಡಿ, ಐವಿಎಫ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net