ಗಡಿಯಲ್ಲಿ ಚೀನಾದಿಂದ ವಾಯು ರಕ್ಷಣಾ ನೆಲೆ ನಿರ್ಮಾಣ

Health (3)
Published on

ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ಚೀನಾ ಹೊಸದಾಗಿ ವಾಯು ರಕ್ಷಣಾ ಸಂಕೀರ್ಣವೊಂದನ್ನು ನಿರ್ವಿುಸುತ್ತಿರುವುದು ಉಪಗ್ರಹ ಚಿತ್ರಗಳಿಂದ ತಿಳಿದು ಬಂದಿದೆ. ಕಮಾಂಡ್ ಮತ್ತು ನಿಯಂತ್ರಣ ಕಟ್ಟಡಗಳು, ಬ್ಯಾರಕ್, ವಾಹನ ಶೆಡ್, ಮದ್ದುಗುಂಡು ಕೋಠಿ ಮತ್ತು ರೇಡಾರ್ ತಾಣ ಮೊದಲಾದವು ಈ ಸಂಕೀರ್ಣದಲ್ಲಿದ್ದು ನಿರ್ಮಾಣ ಕಾರ್ಯ ಭರದಿಂದ ಸಾಗಿವೆ. 2020ರ ಭಾರತ-ಚೀನಾ ನಡುವಿನ ಗಡಿ ಸಂಘರ್ಷದ ಕೇಂದ್ರದಿಂದ ಸುಮಾರು 110 ಕಿಮೀ ದೂರದಲ್ಲಿ ಟಿಬೆಟ್​ನಲ್ಲಿರುವ ಪಾಂಗಾಂಗ್ ಸರೋವರದ ಪೂರ್ವ ದಂಡೆ ಮೇಲೆ ನಿರ್ಮಾಣ ಕೆಲಸ ನಡೆಯುತ್ತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಮರೆಮಾಚಲಾದ ಕ್ಷಿಪಣಿ ಉಡಾವಣಾ ವಾಹನಗಳನ್ನು ಹೊಂದಿರುವುದು ಈ ಕೇಂದ್ರದ ಕುತೂಹಲಕಾರಿ ಅಂಶವಾಗಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net