ಚಂದದ ಮೂಗಿನ ಅಂದ ಹೆಚ್ಚಿಸಲು ಹೋದ ಸೆಲೆಬ್ರಿಟಿಗೆ ಕಾದಿತ್ತು ಶಾಕ್​! ಆಗಿದ್ದೇನು ಗೊತ್ತಾ?

china'
Published on

ಬೀಜಿಂಗ್​: ದೇವರು ಕೊಟ್ಟ ಅಂದವನ್ನು ಇನ್ನಷ್ಟು ಸರಿಪಡಿಸಿಕೊಳ್ಳಲು ಹೋಗಿ ಹಾಳು ಮಾಡಿಕೊಳ್ಳುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ. ಅದರಲ್ಲೀ ಈ ಸೆಲೆಬ್ರಿಟಿಗಳ ಮಾಡಿಸಿಕೊಳ್ಳುವಷ್ಟು ಕಾಸ್ಮೆಟಿಕ್​ ಸರ್ಜರಿಗಳನ್ನು ಮತ್ಯಾರೂ ಮಾಡಿಸಿಕೊಳ್ಳುವುದಿಲ್ಲ. ಅದೇ ರೀತಿ ಮೂಗಿನ ಅಂದ ಹೆಚ್ಚಿಸಲು ಹೋದ ಚೀನಾದ ಸೆಲೆಬ್ರಿಟಿಯೊಬ್ಬಳು ಇದೀಗ ಮೂಗನ್ನೇ ವಿಚಿತ್ರವಾಗಿಸಿಕೊಂಡಿರುವ ಘಟನೆ ನಡೆದಿದೆ.

ಚೀನಾದ ನಟಿ ಮತ್ತು ಗಾಯಕಿ ಗಾವೊ ಲಿಯು ಈ ರೀತಿಯ ಸಾಹಸಕ್ಕೆ ಕೈ ಹಾಕಿದಾಕೆ. ಚಂದವಾಗಿಯೇ ಇರುವ ಆಕೆಗೆ ಮೂಗನ್ನು ಇನ್ನಷ್ಟು ಉದ್ದ ಮಾಡಿಸಿಕೊಳ್ಳುವ ಆಸೆ ಹುಟ್ಟಿತಂತೆ. ಅದೇ ಆಸೆಯ ಮೇರೆಗೆ ಸ್ನೇಹಿತರೊಬ್ಬರ ಸಹಾಯದಿಂದ ಪ್ಲಾಸ್ಟಿಕ್​ ಸರ್ಜನ್​ ಒಬ್ಬರನ್ನು ಭೇಟಿ ಮಾಡಿದ್ದಾರೆ. ಆ ಪ್ಲಾಸ್ಟಿಕ್​ ಸರ್ಜನ್​ ಬಳಿ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೆ ಸರ್ಜರಿ ಆದ ಕೆಲವೇ ದಿನಗಳಲ್ಲಿ ಆಕೆಯ ಮೂಗಿನ ತುದಿ ಕಪ್ಪು ಬಣ್ಣಕ್ಕೆ ತಿರುಗಿದೆ. ಮೂಗಿನ ತುಡಿದ ಜೀವಕೋಶಗಳು ಸತ್ತು ಹೋಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ವಿಚಾರಿಸಿದಾಗ ಆಕೆ ಚಿಕಿತ್ಸೆ ಪಡೆದ ಆಸ್ಪತ್ರೆ ಮೂಗಿನ ಸರ್ಜರಿ ಮಾಡಲು ಅನುಮತಿ ಪಡೆದಿರಲಿಲ್ಲ ಎನ್ನುವುದು ತಿಳಿದುಬಂದಿದೆ.

ತಾನು ಮೋಸವಾದ ಬಗೆಯನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ನನ್ನಂತೆ ನೀವೂ ಮೋಸ ಹೋಗಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾಳೆ. ಸರ್ಜರಿಗೆ ಮೊದಲಿನ ಮುಖದ ಫೋಟೋ ಮತ್ತು ಸರ್ಜರಿ ನಂತರದ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net