ಶಾಲೆಗಳಲ್ಲೇ ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್​ಡೇಟ್

Aadhar Card
Published on

ನವದೆಹಲಿ: ಮಕ್ಕಳ ಆಧಾರ್ ಬಯೋಮೆಟ್ರಿಕ್ ಇಂದುಗೊಳಿಸುವಿಕೆ (ಅಪ್​ಡೇಟ್) ಕಾರ್ಯವನ್ನು ಇನ್ನೆರಡು ತಿಂಗಳಲ್ಲಿ ಹಂತಹಂತವಾಗಿ ಪ್ರಾರಂಭಿಸಲಾಗುವುದು ಎಂದು ಯೂನಿಕ್ ಐಡೆಂಟಿಫಿಕೇಶನ್ ಆಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭುವನೇಶ್ ಕುಮಾರ್ ತಿಳಿಸಿದ್ದಾರೆ. 5 ವರ್ಷ ತುಂಬುತ್ತಿದ್ದಂತೆಯೇ ಆಧಾರ್ ಬಯೋಮೆಟ್ರಿಕ್ ಅಪ್​ಡೇಟ್ ಮಾಡಿಸುವುದು ಕಡ್ಡಾಯ.

ಆದರೆ ಸುಮಾರು 7 ಕೋಟಿ ಮಕ್ಕಳು ಅಪ್​ಡೇಟ್ ಮಾಡಿಸಿಲ್ಲ. ಹೀಗಾಗಿ ಬಯೋಮೆಟ್ರಿಕ್ ಯಂತ್ರಗಳನ್ನು ಶಾಲೆಗಳಿಗೆ ಕಳಿಸಲಾಗುವುದು. ಒಂದು ಶಾಲೆ ಬಳಿಕ ಇನ್ನೊಂದು ಶಾಲೆಗೆ ಈ ಯಂತ್ರಗಳನ್ನು ಸಿಬ್ಬಂದಿ ತೆಗೆದುಕೊಂಡು ಹೋಗಲಿದ್ದಾರೆ. ಇದಕ್ಕೆ ಶಾಲೆಗಳ ಮತ್ತು ಪಾಲಕರ ಪೂರ್ವಾನುಮತಿ ಪಡೆಯಲಾಗುವುದು ಎಂದು ಅವರು ವಿವರಿಸಿದ್ದಾರೆ. ಈಗ ನವಜಾತ ಮತ್ತು 5 ವರ್ಷದೊಳಗಿನ ಮಕ್ಕಳ ಆಧಾರ್ ಮಾಡಿಸುವಾಗ ಬೆರಳಚ್ಚು, ಕಣ್ಣಿನಪಾಪೆಯ ಚಿತ್ರ ಮುಂತಾದ ಬಯೋಮೆಟ್ರಿಕ್ಸ್ ವಿವರ ಪಡೆದಿರುವುದಿಲ್ಲ. 7 ವರ್ಷ ಆಗುವುದರೊಳಗೆ ಮಕ್ಕಳ ಬಯೋಮೆಟ್ರಿಕ್ ಅಪ್​ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಸಂಖ್ಯೆ ರದ್ದಾಗುತ್ತದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net