

ಬೆಂಗಳೂರು: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಮತ್ತು ಸಂತ್ರಸ್ತರ ತಾಯಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್ ಟಿಎಸ್ ಸಿ -1ನೇ ನ್ಯಾಯಾಲಯ ತೀರ್ಪು ನೀಡಿದೆ.
ರಾಜರಾಜೇಶ್ವರಿನಗರದ ಬಂಗಾರಪ್ಪನಗರ ನಿವಾಸಿ ಹೇಮಂತ್ ಮತ್ತು ನೊಂದ ಮಕ್ಕಳ ತಾಯಿಗೆ 5 ವರ್ಷ ಜೈಲು ಶಿಕ್ಷೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಸಂತ್ರಸ್ತ ಮಕ್ಕಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವಂತೆ ಡಿಎಲ್‌ಎಸ್‌ಎಗೆ ನ್ಯಾ.ಕೆ.ಎನ್.ರೂಪಾ ಅವರು ತೀರ್ಪು ಪ್ರಕಟಸಿದ್ದಾರೆ.
ಮೈಸೂರು ರಸ್ತೆ ನಾಯಂಡಹಳ್ಳಿಯಲ್ಲಿ ಅಪ್ರಾಪ್ತ ಇಬ್ಬರು ಹೆಣ್ಣು ಮಕ್ಕಳು ತಂದೆ-ತಾಯಿ ಜತೆಗೆ ನೆಲೆಸಿದ್ದರು. 2020ರಲ್ಲಿ ಮಕ್ಕಳ ತಂದೆ ಅಪರಾಧ ಪ್ರಕರಣದಲ್ಲಿ ಹಾಸನದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಇತ್ತ ಈತನ ಪತ್ನಿ, ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಂಗಾರಪ್ಪನಗರಕ್ಕೆ ಬಂದು ಪ್ರಿಯಕರ ಹೇಮಂತ್ ಜೊತೆಗೆ ನೆಲೆಸಿ ಅಕ್ರಮ ಸಂಬಂಧ ಹೊಂದಿದ್ದಳು.
ಇದರ ನಡುವೆ ಜೈಲಿನಿಂದ ಪತ್ನಿ ಮತ್ತು ಮಕ್ಕಳಿಗೆ ಕರೆ ಮಾಡಿದ್ದ. ಮಾತನಾಡುವ ಸಮಯದಲ್ಲಿ ಮಕ್ಕಳ, ತನ್ನ ತಾಯಿಯ ಬೇರೆಯೊಂದಿಗೆ ಇರುವ ವಿಚಾರ ತಿಳಿಸಿದ್ದರು. ಇದರಿಂದ ಕೋಪಗೊಂಡ ತಾಯಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಳು. ಅಲ್ಲದೆ, ಆಕೆಯ ಪ್ರಿಯಕರ ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡಸಿ ಕಾಲಿನಿಂದ ಒದ್ದು, ಖಾಸಗಿ ಭಾಗಗಳಲ್ಲಿ ಕಚ್ಚಿ ಗಾಯಗೊಳಿಸಿದ್ದ. ಚಾಕು ಬಿಸಿ ಮಾಡಿ ಮೈ ಮೇಲೆ ಇಟ್ಟು ಸುಟ್ಟಿದ ಗಾಯ ಮಾಡಿದ್ದರು. ಹೆತ್ತ ತಾಯಿ ಮಕ್ಕಳ ರಕ್ಷಣೆಗೆ ಬಂದಿರಲಿಲ್ಲ.
ಮಕ್ಕಳ ರೋಧನೆಯನ್ನು ಗಮನಿಸಿದ ಸಮೀಪದ ದಿನಸಿ ಅಂಗಡಿ ಮಾಲೀಕ, ಪೊಲೀಸರಿಗೆ ದೂರು ನೀಡಿದ್ದರು.ಇದರ ಮೇರೆಗೆಪೋಕ್ಸೋ ಪ್ರಕರಣ ದಾಖಲು ಮಾಡಿಕೊಂಡ ರಾಜರಾಜೇಶ್ವರಿನಗರ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಕೃಷ್ಣವೇಣಿ, ಸಂತ್ರಸ್ತ ಮಕ್ಕಳ ಪರವಾಗಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ. ಕೆ.ಎನ್.ರೂಪಾ ಅವರು ಆರೋಪಿತರ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ೋಷಣೆ ಮಾಡಿ ಶಿಕ್ಷೆ ಪ್ರಕಟಿಸಿದ್ದಾರೆ.