

ಅಳವಂಡಿ: ಮಕ್ಕಳಿಗೆ ಶಿಸ್ತು, ಸ್ವಚ್ಛತೆ, ಪರಿಸರದ ಮಹತ್ವ ಹಾಗೂ ಜೀವನದ ಮೌಲ್ಯ ತಿಳಿಸಬೇಕು. ಶಾಲೆಯನ್ನು ಆಕರ್ಷಣೆಯನ್ನಾಗಿ ಮಾಡಿ ಮಕ್ಕಳನ್ನು ಶಾಲೆಯತ್ತ ಬರುವಂತೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಶಂಕ್ರಯ್ಯ ತಿಳಿಸಿದರು.
ಇದನ್ನೂ ಓದಿ: ಜೀವನದ ಮೌಲ್ಯಗಳನ್ನು ಅರಿತು ಸಾಗಿಜೀವನದ ಮೌಲ್ಯ
ಗ್ರಾಮದ ಕೇಂದ್ರೀಯ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಅಜಿಂ ಪ್ರೇಮ್‌ಜೀ ಫೌಂಡೇಶನ್ ಸಹಯೋಗದಲ್ಲಿ ಹ್ಮಮ್ಮಿಕೊಂಡಿದ್ದ ವಲಯದ ನಲಿಕಲಿ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿ, ಶಿಕ್ಷಕರು ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ಶಾಲೆಯನ್ನು ಸುಂದರವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಮಕ್ಕಳ, ಶಿಕ್ಷಣ ಹಾಗೂ ಸುರಕ್ಷತೆಗೆ ಒತ್ತು ನೀಡಬೇಕು. ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಕ್ರಿಯಾಶೀಲರಾಗಿದ್ದರೆ ಮಾತ್ರ ಶಾಲೆ ಸುಂದರವಾಗಿರಲು ಹಾಗೂ ಮಕ್ಕಳಲ್ಲಿ ಶಿಸ್ತು ಬೆಳೆಯಲು ಸಾಧ್ಯ. ಸರ್ಕಾರದ ಶೈಕ್ಷಣಿಕ ಸೌಲಭ್ಯವನ್ನು ಮಕ್ಕಳಿಗೆ ತಲುಪಿಸಿ ಗುಣಮಟ್ಟದ ಶಿಕ್ಷಣ ನೀಡಿ ಎಂದರು.
ನಲಿಕಲಿ ಪಠ್ಯ, ಪ್ರಗತಿನೋಟ ಕಾರ್ಡ್, ವಿದ್ಯಾಪ್ರವೇಶ, ಸೇತುಬಂಧ, ಇಲಾಖಾ ಮಾಹಿತಿ ನೀಡಲಾಯಿತು. ಬಿಆರ್‌ಸಿ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ, ಇಸಿಒ ಗವಿಸಿದ್ದೇಶ ಶೆಟ್ಟರ್, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಬಸವರಾಜ, ಕೌಟಿ ವೀರೇಶ, ಟಿಎಲ್‌ಸಿ ಸಂಚಾಲಕ ದೇವರಾಜ, ಜ್ಯೋತಿ, ನಾಗರಾಜ ಇದ್ದರು.