More

    ಜೀವನದ ಮೌಲ್ಯಗಳನ್ನು ಅರಿತು ಸಾಗಿ

    ಕುರುಗೋಡು: ನಿಷ್ಕಲ್ಮಶದಿಂದ ಜನಸೇವೆ ಮಾಡಿದರೆ ಭಗವಂತನ ಸೇವೆ ಮಾಡಿದಂತೆ ಎಂದು ಶ್ರೀ ಸದ್ಗರು ಷಡಕ್ಷರಿ ಸ್ವಾಮೀಜಿ ಹೇಳಿದರು.

    ತಾಲೂಕಿನ ಸೋಮಲಾಪುರದಲ್ಲಿ ಚಿದಾನಂದ ಮಹಾಸ್ವಾಮೀಜಿ ಅವಧೂತರ 31ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು-ವರರನ್ನು ಆಶೀರ್ವದಿಸಿ ಮಾತನಾಡಿದರು.

    ಎಲ್ಲವನ್ನೂ ಸಮನಾಗಿ ಸ್ವೀಕರಿಸಿ

    ನೂತನ ವಧು-ವರರು ಜೀವನದ ಮೌಲ್ಯಗಳನ್ನು ಅರಿತು, ಸಂಸಾರದ ಚೌಕಟ್ಟಿನಲ್ಲಿ ಎಲ್ಲವನ್ನೂ ಸಮನಾಗಿ ಸ್ವೀಕರಿಸಿ ಸುಂದರ ಬಾಳು ಬಾಳಿದರೆ ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿದೆ ಎಂದರು.

    ಸಾಮೂಹಿಕ ವಿವಾಹ ಕಾರ್ಯ ಹೆಚ್ಚಾದಂತೆಲ್ಲ ಬಡ ಕುಟುಂಬಗಳಿಗೆ ವರದಾನವಾಗುವ ಜತೆಗೆ ಸರ್ವರೂ ಸಮಾನರು ಎಂಬುದನ್ನು ತೋರಿಸುತ್ತದೆ ಎಂದರು.
    ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು 28 ವಷರ್ಗಳಿಂದ ನಿರಂತರವಾಗಿ ಶ್ರೀಮಠದಲ್ಲಿ ನಡೆಯುತ್ತವೆ. ಈ ವಷರ್ದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 46 ಜೋಡಿ ವಧು-ವರರು ನವ ಜೀವನಕ್ಕೆ ಕಾಲಿಟ್ಟರು. ರಾಜನಹಳ್ಳಿಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಎಚ್.ವೀರಾಪುರದ ಜ್ಞಾನ ಜ್ಯೋತಿ ಶಿವಯೋಗಮಂದಿರ ಶ್ರೀ ಜಡೇಶ ತಾತ ಸಾನ್ನಿಧ್ಯವಹಿಸಿದ್ದರು.

    ಇದನ್ನು ಓದಿ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts