ಮಕ್ಕಳೇ, ಸಹಬಾಳ್ವೆಯ ಸಂಕಲ್ಪ ಮಾಡಿ

RAKSHA BANDHANA
ಶಿಕಾರಿಪುರದಲ್ಲಿ ರಕ್ಷಾಬಂಧನ ಉತ್ಸವದಲ್ಲಿ ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ ಮಾತನಾಡಿದರು. ಪ್ರಾಚಾರ್ಯ ವಿಶ್ವನಾಥ್, ಉಪ ಪ್ರಾಚಾರ್ಯ ಪ್ರಶಾಂತ್, ಶಿಕ್ಷಕರು ಇದ್ದರು.
Published on

ಶಿಕಾರಿಪುರ: ನಾವು ಸಹೋದರತ್ವ, ಸೌಹಾರ್ದ ಮತ್ತು ಸಹಬಾಳ್ವೆಯ ಸಂಕಲ್ಪ ಮಾಡಿ ರಕ್ಷೆಯನ್ನು ಕಟ್ಟಬೇಕು ಮತ್ತು ಕಟ್ಟಿಸಿಕೊಳ್ಳಬೇಕು ಎಂದು ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹೀರೆಮಠ ಹೇಳಿದರು.

ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಭಾವನಾತ್ಮಕ, ಸಹೋದರತ್ವ ಸಾರುವ ದಿನವಿದು. ಅವಿಭಕ್ತ ಕುಟುಂಬಗಳು ಇಲ್ಲದಾಗಿವೆ. ಈಗ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಸಂಪ್ರದಾಯ, ಆಚರಣೆಗಳೂ ಕಡಿಮೆಯಾಗಿವೆ ಎಂದರು.
ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ಮಹಿಳೆಯರು ಗಿಡಮರಗಳಿಗೆ ರಕ್ಷೆಯನ್ನು ಕಟ್ಟಿ ಕಾಡನ್ನು ರಕ್ಷಣೆ ಮಾಡುತ್ತಿದ್ದರು. ಏಕೆಂದರೆ ನಾವು ಕಾಡನ್ನು ರಕ್ಷಿಸಿದರೆ ಕಾಡು ನಮ್ಮನ್ನು ರಕ್ಷಿಸುತ್ತದೆ ಎಂಬುದು ಅವರ ಉದ್ದೇಶವಾಗಿತ್ತು. ಕಾಡು ಅತ್ಯಮೂಲ್ಯ ಸಂಪತ್ತು ಮತ್ತು ಜೀವಜಗತ್ತು. ಅದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ಪ್ರಾಚಾರ್ಯ ವಿಶ್ವನಾಥ ಮಾತನಾಡಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪೌರ್ಣಮಿಯಂದು ರಕ್ಷಾಬಂಧನ ಹಬ್ಬ ಆಚರಿಸುತ್ತಾರೆ. ಸಹೋದರ ಸಹೋದರಿಯರು ಭ್ರಾತ್ವತ್ವದ ಭಾವನೆ ಬೆಳೆಸಿಕೊಂಡು ಅಣ್ಣನ ರಕ್ಷಣೆಗಾಗಿ ತಂಗಿ ಮತ್ತು ತಂಗಿಯ ರಕ್ಷಣೆಗಾಗಿ ಅಣ್ಣ ಕಟ್ಟುವ ರಕ್ಷೆಯೇ ಈ ರಕ್ಷಾಬಂಧನ ಎಂದರು.
ಶಾಲೆ ಉಪ ಪ್ರಾಚಾರ್ಯ ಪ್ರಶಾಂತ ಕುಬಸದ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net