

ರಿಪ್ಪನ್‌ಪೇಟೆ: ಶಿಕ್ಷಣದ ವೇಳೆ ಪಠ್ಯ ಚಟುವಟಿಕೆ ಜತೆಗೆ ಕ್ರೀಡೆ ಬಹಳ ಮುಖ್ಯ. ಏಕೆಂದರೆ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಸಹಕಾರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಹುಂಚ ಮತ್ತು ರಿಪ್ಪನ್‌ಪೇಟೆ ಹೋಬಳಿಯ 17 ವರ್ಷದೊಳಗಿನ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಇಂದಿನ ಬಹುತೇಕ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಇರುವುದರಿಂದ ಶಾಲೆಗಳಲ್ಲಿಯೇ ಪೌಷ್ಟಿಕ ಆಹಾರ ನೀಡುವ ಯೋಜನೆ ಕೈಗೊಳ್ಳಲಾಗಿದೆ. ಹೊಸನಗರ ತಾಲೂಕಿನ ವಿದ್ಯಾರ್ಥಿಗಳು ಓದಿನಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಬಿಇಒ ಕೃಷ್ಣಮೂರ್ತಿ, ಮೇರಿಮಾತಾ ಸಂಸ್ಥೆಯ ಮದರ್ ಲಿನ್ಸಾ ಮೇರಿ, ಮುಖ್ಯಶಿಕ್ಷಕಿ ಗ್ರೇಸ್ಲೀನಾ, ಗ್ರಾಪಂ ಸದಸ್ಯರಾದ ಆಸ್ೀ, ಗಣಪತಿ, ಮಧುಸೂದನ, ಅಶ್ವಿನಿ, ಪಿಎಸ್‌ಐ ಪ್ರವೀಣ್ ಇತರರಿದ್ದರು.