ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಅಗತ್ಯ

31sgr2
ಸಾಗರದ ಎಚ್.ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇ.ಪರಶುರಾಮಪ್ಪ, ಯು.ಜೆ.ಮಲ್ಲಿಕಾರ್ಜುನ ಇತರರಿದ್ದರು.
Published on

ಸಾಗರ: ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪೂರಕ ಕಾರ್ಯಕ್ರಮ ಅವಶ್ಯಕ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಎಚ್.ಶಿವಲಿಂಗಪ್ಪ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ವಿದ್ಯಾವರ್ಧಕ ಸಂಘ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ನಿರಂತರ ಕಲಿಕೆಯಿಂದ ನಮ್ಮಲ್ಲಿನ ಪ್ರತಿಭೆ ವೃದ್ಧಿಯಾಗುತ್ತದೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಮಕ್ಕಳು ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಾಲೆಗೆ ಕೀರ್ತಿ ತರುವ ಜತೆಗೆ ಪಾಲಕರ ಕನಸು ನನಸು ಮಾಡಬೇಕು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಇ.ಪರಶುರಾಮಪ್ಪ, ಯು.ಜೆ.ಮಲ್ಲಿಕಾರ್ಜುನ್, ನಗರಸಭೆ ಸದಸ್ಯ ವಿ.ಮಹೇಶ್, ಗಣಪತಿ ಮಂಡಗಳಲೆ, ಡಾ. ಅನ್ನಪೂರ್ಣ, ಭೂಮೇಶ್, ಲಕ್ಷ್ಮಣ್ ಆರ್.ನಾಯ್ಕ, ಟಿ.ಪಿ.ಸುಬ್ರಹ್ಮಣ್ಯ, ವಿ.ಟಿ.ಸ್ವಾಮಿ, ಎಸ್.ಎನ್.ಪಾಲಾಕ್ಷಪ್ಪ, ಕೆ.ಎಚ್.ಜ್ಞಾನೇಶ್ವರಪ್ಪ, ಮಹೇಶ್ ಮಡಿವಾಳ, ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net