ಲಾಕ್​ಡೌನ್​ ಎಫೆಕ್ಟ್, ವಾಟ್ಸ್ಆ್ಯಪ್ ವಿಡಿಯೋ ಕಾಲ್​ ಮೂಲಕ ಸಹಜ ಹೆರಿಗೆ ಮಾಡಿದ ಸ್ಥಳೀಯರು!

childbirth
Published on

ಹಾವೇರಿ: ತುಂಬು ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರೂ ಸ್ಥಳೀಯವಾಗಿ ವೈದ್ಯರು ಸಿಗಲಿಲ್ಲ. ಇನ್ನು ಬೇರೆಡೆಯ ಆಸ್ಪತ್ರೆಗೆ ಕರೆದೊಯ್ಯೋಣ ಎಂದರೂ ವಾಹನಗಳ ಲಭ್ಯತೆಯೂ ಇರಲಿಲ್ಲ. ಅಲ್ಲದೆ ಲಾಕ್​ಡೌನ್ ಹಿನ್ನೆಲೆ ಆ ಊರು ಕೂಡ ಸ್ತಬ್ಧವಾಗಿತ್ತು.

ನಂತರ ತಾವೇ ಹೆರಿಗೆ ಮಾಡಲು ನಿರ್ಧರಿಸಿದ ಸ್ಥಳೀಯ ಮಹಿಳೆಯರು ವಾಟ್ಸ್ಆ್ಯಪ್ ವಿಡಿಯೋ ಕಾಲ್​ ಮೂಲಕ ವೈದ್ಯರೊಬ್ಬರ ಸಲಹೆ ಮೇರೆಗೆ ಸಹಜ ಹೆರಿಗೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ನಿನ್ನೆ(ಸೋಮವಾರ) ಲಾಕ್​ಡೌನ್ ಹಿನ್ನೆಲೆಯಲ್ಲಿ ಹಾನಗಲ್ ಪಟ್ಟಣ ಸ್ತಬ್ಧವಾಗಿತ್ತು. ಇದೇ ವೇಳೆ ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯವಾಗಿ

ವಾಹನ ಮತ್ತು ವೈದ್ಯರು ಸಿಗದೆ ಪರದಾಡಿದರು. ನಂತರ ತಾವೇ ಹೆರಿಗೆ ಮಾಡಲು ನಿರ್ಧರಿಸಿದ ಸ್ಥಳೀಯ ಮಹಿಳೆಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಡಾ.ಪ್ರಿಯಾಂಕಾ ಮಂತಗಿ ಅವರಿಗೆ ಕರೆ ಮಾಡಿದರು. ಹೆರಿಗೆ ವಿಧಾನವನ್ನು ವಾಟ್ಸ್ಆ್ಯಪ್ ವಿಡಿಯೋ ಕಾಲ್​ನಲ್ಲೇ ವೈದ್ಯೆ ತಿಳಿಸಿದರು. ಅದರಂತೆ ಸ್ಥಳೀಯ ಮಹಿಳೆಯರು ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲಿ ಸಫಲರಾದರು.

ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಮಹಿಳೆಯರ ಮತ್ತು ವೈದ್ಯರ ಸಮಯಪ್ರಜ್ಞೆ, ಮಾನವೀಯತೆ, ಸಾಹಸಕ್ಕೆ ಜನರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

s

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net