

ರಾಣೆಬೆನ್ನೂರ: ತಂತ್ರಜ್ಞಾನ ಮತ್ತು ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಗಳೊಂದಿಗೆ ವಿದ್ಯಾಥಿರ್ಗಳು ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಶಿವಕುಮಾರ ಬಿ. ಹೇಳಿದರು.
ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ 2023&24ನೇ ಸಾಲಿನಲ್ಲಿ ಉತ್ತೀರ್ಣರಾದ ಪದವಿ ವಿದ್ಯಾಥಿರ್ಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿರ್ಗಳು ತಮ್ಮ ಮೌಲ್ಯ ಮತ್ತು ಸಂಸತಿ, ಸಂಪ್ರದಾಯ ಉಳಿಸಿಕೊಂಡು ಹೋಗಬೇಕು. ಬೆಳೆಯುತ್ತಿರುವ ಈ ಜಗತ್ತಿಗೆ ಪೈಪೋಟಿ ನೀಡಿ ತಮ್ಮದೆಯಾದ ವಿಶೇಷ ಕೊಡುಗೆ ನೀಡಬೇಕು ಎಂದರು.
ಅಕಾಡೆಮಿಕ್ ಡೀನ್ ಡಾ. ಎಸ್.ಎಫ್. ಕೊಡದ, ಸಿ.ಎಂ. ಪರಮೇಶ್ವರಪ್ಪ, ಡಾ. ಎಸ್.ಜಿ. ಮಾಕನೂರು, ಡಾ. ಬಿ. ಮಹೇಶ್ವರಪ್ಪ, ದಿನೇಶ ಮಾಗನೂರ, ಭಾವನಾ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.