

ಬಾಗ್ದಾದ್: ಒಬ್ಬ ವ್ಯಕ್ತಿಗೆ ಒಂದು ಜನನಾಂಗ ಇರುವುದು ಸಾಮಾನ್ಯ. ಆದರೆ ಈ ಒಂದು ಮಗು ಹುಟ್ಟುವಾಗಲೇ ಮೂರು ಜನನಾಂಗಗಳೊಂದಿಗೆ ಹುಟ್ಟಿದೆ. ಪ್ರಪಂಚದಲ್ಲಿ ಈ ರೀತಿ ಮೂರು ಜನನಾಂಗದೊಂದಿಗೆ ಹುಟ್ಟಿದ ಮೊದಲನೇ ಮಗುವಿದು ಎಂದು ವೈದ್ಯರು ತಿಳಿಸಿದ್ದಾರೆ.
ಇರಾಖ್ನಲ್ಲಿ ಇಂತದ್ದೊಂದು ಮಗು ಜನಿಸಿದೆ. ಬೇರೆಲ್ಲ ಮಕ್ಕಳಂತೆ ಒಂದು ಜನನಾಂಗ, ಅದರ ಬಳಿಯೇ ಇನ್ನೊಂದು ಜನನಾಂಗ ಹಾಗೂ ಅಂಡಾಶಯದ ಬಳಿ ಒಂದು ಜನನಾಂಗ ಕಂಡುಬಂದಿದೆ. ಮೊದಲಿಗೆ ಏನೆಂದು ಗೊತ್ತಾಗದಿದ್ದರೂ ವೈದ್ಯಕೀಯ ಪರೀಕ್ಷೆಯ ನಂತರ ಈ ವಿಚಾರ ವೈದ್ಯರಿಗೆ ತಿಳಿದುಬಂದಿದೆ.
ಈ ವಿಚಾರವನ್ನು ಇಂಟರ್ನ್ಯಾಷನಲ್ ಜರ್ನಲ್ ಸರ್ಜರಿಯಲ್ಲಿ ಡಾ.ಶಕೀರ್ ಸಲೀಮ್ ಜಬಾಲಿ ಮತ್ತು ಅಯಾದ್ ಅಹ್ಮದ್ ಮೊಹಮ್ಮದ್ ಅವರು ಪ್ರಕಟಿಸಿದ್ದಾರೆ. ಈ ಹಿಂದೆ 2015ರಲ್ಲಿ ಭಾರತದಲ್ಲಿ ಮೂರು ಜನನಾಂಗದೊಂದಿಗೆ ಮಗುವೊಂದು ಜನಿಸಿತ್ತು. ಆದರೆ ಅದನ್ನು ಜರ್ನಲ್ನಲ್ಲಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಮಗುವನ್ನೇ ಈ ರೀತಿ ವಿಶೇಷವಾಗಿ ಜನಿಸಿದ ಮೊದಲು ಮಗು ಎಂದು ಪರಿಗಣಿಸಲಾಗಿದೆ. ಈಗ ಹುಟ್ಟಿರುವ ಈ ಮಗುವಿನ ಎರಡು ಜನನಾಂಗಳಲ್ಲಿ ಮೂತ್ರನಾಳಗಳು ಇಲ್ಲದ ಹಿನ್ನೆಲೆಯಲ್ಲಿ ಅದನ್ನು ಆಪರೇಷನ್ ಮಾಡಿ ತೆಗೆಯಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)