More

    ಮದುವೆ ಉಡುಗೆಯಲ್ಲೇ ಗಿನ್ನೆಸ್​ ರೆಕಾರ್ಡ್​! ಆಕೆ ಧರಿಸಿದ್ದು 7 ಕಿಮೀ ಉದ್ದದ ಗೌನ್​!

    ಸೈಪ್ರಸ್: ಯಾವ ಯಾವುದೋ ವಿಚಾರಗಳಲ್ಲಿ ಗಿನ್ನೆಸ್​ ರೆಕಾರ್ಡ್​ ಮಾಡುವುದನ್ನು ಕೇಳಿರುತ್ತೀರಿ. ಆದರೆ ಈ ಯುವತಿ ಎಲ್ಲರಿಗಿಂತ ಡಿಫರೆಂಟ್​. ತನ್ನ ಮದುವೆಯಲ್ಲಿ ತಾನು ತೊಟ್ಟ ಉಡುಗೆಯಿಂದಲೇ ಗಿನ್ನೆಸ್​ ರೆಕಾರ್ಡ್​ ಬರೆದಿದ್ದಾಳೆ ಈ ಯುವತಿ.

    ಹೌದು. ಸೈಪ್ರಸ್ ದೇಶದಲ್ಲಿ ಇಂತದ್ದೊಂದು ರೆಕಾರ್ಡ್​ ನಿರ್ಮಾಣವಾಗಿದೆ. ಮರಿಯಾ ಹೆಸರಿನ ಯುವತಿಗೆ ಚಿಕ್ಕವಳಿದ್ದಾಗಿನಿಂದಲೂ ಒಂದು ಕನಸಿತ್ತಂತೆ. ತಾನು ತೊಡುವ ಮದುವೆ ಡ್ರೆಸ್​ ವರ್ಲ್ಡ್​ ರೆಕಾರ್ಡ್​ ಆಗಬೇಕೆಂಬ ಆಸೆಯಿತ್ತಂತೆ. ಅದಕ್ಕಾಗಿಯೇ ಸುಮಾರು 7 ಕಿಮೀ ಉದ್ದದ ಗೌನ್​ ಹೊಲಿಸಿಕೊಂಡಿದ್ದಾಳೆ. ದೊಡ್ಡದೊಂದು ಗ್ರೌಂಡ್​ನಲ್ಲಿ ನಿಂತು ಆ ಗೌನ್​ನನ್ನೇ ಹಾಸಿದ್ದಾಳೆ. ಅದಾದ ನಂತರ ಅದರ ವಿಡಿಯೋ ಮಾಡಲಾಗಿದೆ. ಆ ವಿಡಿಯೋವನ್ನು ಗಿನ್ನೆಸ್​ ರೆಕಾರ್ಡ್​ ಪೇಜ್​ ಹಂಚಿಕೊಂಡಿದ್ದು, ಪ್ರಪಂಚದ ಅತ್ಯಂತ ಉದ್ದದ ಮದುವೆ ಡ್ರೆಸ್​ ಎನ್ನುವ ಅವಾರ್ಡ್​ನ್ನು ಆಕೆಗೆ ಕೊಟ್ಟಿದೆ.

    ಅಂದ ಹಾಗೆ ಈ ಉದ್ದದ ಡ್ರೆಸ್​ನ್ನು ಗ್ರೌಂಡ್​ನಲ್ಲಿ ಹಾಸುವುದಕ್ಕೆ 6 ಗಂಟೆಗೂ ಹೆಚ್ಚು ಕಾಲ ತಗಲಿದೆಯಂತೆ. ದೇವಸ್ಥಾನಗಳಲ್ಲಿ ಕ್ಯೂ ನಿಲ್ಲುವ ರೀತಿಯಲ್ಲೇ ಡ್ರೆಸ್​ನ್ನು ಹಾಸಲಾಗಿದೆ. 30 ಸ್ವಯಂ ಸೇವಕರು ಗೌನ್ ಹಾಸುವುದಕ್ಕೆ ಸಹಾಯ ಮಾಡಿದ್ದಾಗಿ ಮರಿಯಾ ಹೇಳಿಕೊಂಡಿದ್ದಾಳೆ. ಈ ಗೌನ್​ ವಿಚಾರ ಇದೀಗ ಎಲ್ಲೆಡೆ ಹರಿದಾಡುತ್ತಿದೆ. (ಏಜೆನ್ಸೀಸ್​)

    ಕಾರಿನ ಮೇಲೆ ಬಿದ್ದ ಕಂಟೇನರ್​! ನಾಲ್ವರು​ ಅಪ್ಪಚ್ಚಿ

    ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ; ಏಪ್ರಿಲ್​ 5ರಿಂದ ಈ ರೈಲುಗಳಿಗೆ ರಿಸರ್ವೇಷನ್​ ಬೇಡ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts