

ಕೋವಿಡ್-19 ಸೋಂಕಿನಿಂದ ದೂರವಿರಲು ಬಹಳ ಅಗತ್ಯವೆನಿಸಿದ ಪರಿಕರಗಳಲ್ಲಿ ಮಾಸ್ಕ್ ಪ್ರಮುಖವಾದುದು. ಇದು ಇಂದು ಎಲ್ಲರಿಗೂ ಅನಿವಾರ್ಯ ಎಂಬಂತಾಗಿಬಿಟ್ಟಿದೆ. ಈಕ್ವೆಡಾರ್ನ ಅಂಬಾಟೋ ಎಂಬಲ್ಲಿ ಪುಟ್ಟ ಬಾಲಕನೊಬ್ಬ ತನ್ನ ಪ್ರೀತಿಯ ನಾಯಿಮರಿಗೂ ಮಾಸ್ಕ್ ತೊಡಿಸಿದ್ದಾನೆ.
ಮಾಸ್ಕ್ ತೊಟ್ಟ ಆ ಮರಿಯನ್ನು ತನ್ನ ಬೈಸಿಕಲ್ನಲ್ಲಿ ಕೂರಿಸಿಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆಯಿಂದ ಹೊರಬರುತ್ತಲೇ ಬೈಸಿಕಲ್ ಏರಿ ನಾಯಿಮರಿಗೂ ಮಾಸ್ಕ್ ತೊಡಿಸುತ್ತಿರುವ ಬಾಲಕನ ಪರಿಶುದ್ಧ ಪ್ರಾಣಿಪ್ರೀತಿ, ಕಾಳಜಿಯನ್ನು ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಶ್ಲಾಘಿಸಿದ್ದಾರೆ.