ಮಗು ಮಾರಾಟ, ನಾಲ್ವರ ವಿರುದ್ಧ ದೂರು ದಾಖಲು

shikaripura police station
ಶಿಕಾರಿಪುರ ಠಾಣೆ
Published on

ಶಿವಮೊಗ್ಗ: ಶಿಕಾರಿಪುರದಲ್ಲಿ ಹಣಕ್ಕಾಗಿ ಪಾಲಕರೆ ಒಂದು ವರ್ಷ ಎಂಟು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಮಗುವಿನ ಪಾಲಕರು ಮತ್ತು ಖರೀದಿಸಿದ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ದಂಪತಿಗೆ 2023ರ ಆ.15ರಂದು ಹೆಣ್ಣು ಮಗು ಜನಿಸಿತ್ತು. 2025ರ ಜನವರಿ ತಿಂಗಳಲ್ಲಿ ಈ ಮಗುವನ್ನು ಶಿಕಾರಿಪುರ ತಾಲೂಕಿನ ದಂಪತಿಗೆ ಮಗುವಿನ ಪಾಲಕರು ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ರಕ್ಷಿಸಿ ತಾಯಿಗೆ ಒಪ್ಪಿಸಿದ್ದಾರೆ. ಮಗುವಿನ ಪಾಲಕರಿಗೆ 49 ಸಾವಿರ ರೂ. ಮುಂಗಡ ಹಣ ನೀಡಲಾಗಿತ್ತು. ಬಳಿಕ ಗೂಗಲ್ ಪೇ ಮೂಲಕ 30,650 ರೂ. ಕಳುಹಿಸಲಾಗಿತ್ತು ಎನ್ನಲಾಗಿದೆ. ಮಗು ಮಾರಾಟ ಮಾಡಿದ ಮತ್ತು ಖರೀದಿಸಿದ್ದಕ್ಕಾಗಿ ನಾಲ್ವರ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿದೆ. ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net