

ರಾಯಚೂರು: ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ, ಕಠಿಣ ಕಾನೂನು ರೂಪಿಸಿದರೂ ಬಾಲ್ಯ ವಿವಾಹವನ್ನು ಮಾತ್ರ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇಂದಿಗೂ ಕೂಡ ಕೆಲ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ. ಇದೀಗ ಜಿಲ್ಲೆಯ ಮಸ್ಕಿಯಲ್ಲಿ ಪ್ರತ್ಯೇಕ ಎರಡು ಬಾಲ್ಯ ವಿವಾಹ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಮಸ್ಕಿ ತಾಲೂಕಿನ ಮ್ಯಾದರಹಾಳ ಹಾಗೂ ಗೊಲ್ಲರಹಟ್ಟಿಯಲ್ಲಿ ಎರಡು ಪ್ರತ್ಯೇಕ ಬಾಲ್ಯ ವಿವಾಹ ನಡೆದಿದೆ. ಇದೀಗ ಒಟ್ಟು ನಾಲ್ಕು ಜನ ಅಪ್ರಾಪ್ತರನ್ನು ರಕ್ಷಣೆ ಮಾಡಲಾಗಿದೆ. ಒಂದನೇ ಪ್ರಕರಣದಲ್ಲಿ ಯುವಕರಿಬ್ಬರಿಗೆ 17 ವರ್ಷದ ಹಾಗೂ 9 ವರ್ಷದ ಅಕ್ಕ-ತಂಗಿಯರನ್ನು ಮದುವೆ ಮಾಡಿ ಕೊಡಲಾಗಿದೆ. ಎರಡನೇ ಪ್ರಕರಣದಲ್ಲಿ 19 ವರ್ಷದ ಯುವಕನಿಗೆ 11 ವರ್ಷದ ಬಾಲಕಿಯೊಂದಿಗೆ ವಿವಾಹ ಮಾಡಲಾಗಿದೆ.
ಸದ್ಯ ರಕ್ಷಣೆ ಮಾಡಿರುವ ಅಪ್ರಾಪ್ರರನ್ನು ಬಾಲಮಂದಿರಲ್ಲಿ ಇರಿಸಲಾಗಿದೆ. ಬಾಲ್ಯವಿವಾಹ ಹಿನ್ನಲೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಮದುವೆ ಗಂಡು, ಪೋಷಕರು ಸೇರಿ 8 ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಸದ್ಯ ವಿಚಾರಣೆ ಮುಂದುವರೆದಿದೆ.