

ಚಿಕ್ಕಮಗಳೂರು: ಹವಾಮಾನ ವೈಪರೀತ್ಯ, ಮಳೆ-ಬಿಸಿಲು ಆಟದಿಂದ ಕಾಫಿ ನಾಡಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಇವುಗಳಿಂದ ತಗುಲುವ ರೋಗ ಪ್ರಕರಣಗಳ ಸಂಖ್ಯೆಯೂ ಉಲ್ಬಣಿಸುತ್ತಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿದಿನ ಒಮ್ಮೆ ಮಳೆ ಆಗುತ್ತಿದೆ. ಬಯಲುಸೀಮೆ ಭಾಗದಲ್ಲಿ ಆಗಾಗ ಮಳೆಯಾಗುತ್ತದೆ. ಹವಾಮಾನದಲ್ಲಿ ಏರುಪೇರು ಉಂಟಾಗುವುದರಿಂದ ಸೊಳ್ಳೆಗಳ ಸಂತತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ತೀವ್ರವಾಗುವ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ 1671 ಶಂಕಿತರಿಂದ 1393 ಮಂದಿಯ ರಕ್ತದ ಮಾದರಿ ಪರೀಕ್ಷಿಸಿದಾಗ 87 ಡೆಂೆ ಪ್ರಕರಣಗಳು ದೃಢಪಟ್ಟಿವೆ.
ಡೆಂೆ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆ. ಸೋಂಕು ಹೊಂದಿದ ಈಡೀಸ್ ಸೊಳ್ಳೆ ಕಚ್ಚುವುದರಿಂದ ಜ್ವರ ಬಂದು ಅದು ಡೆಂೆಯಾಗಿ ಪರಿವರ್ತನೆಯಾಗುತ್ತದೆ. ಅಲ್ಲದೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಇದೇ ಕಾರಣಕ್ಕೆ ಸೊಳ್ಳೆ, ನೋಣಗಳ ಕಾಟ ಹೆಚ್ಚಾಗಿದೆ. ಜ್ವರ, ಕೆಮ್ಮು, ನೆಗಡಿ, ವಾಂತಿ, ಕೈಕಾಲು ನೋವು, ಡೆಂೆ, ಮಲೇರಿಯಾ ಹೀಗೆ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ಬಾಧಿಸುತ್ತಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಬಯಲುಸೀಮೆ ಭಾಗದಲ್ಲೇ ಹೆಚ್ಚು: ಮಲೆನಾಡು ಭಾಗದಲ್ಲಿ ನಿರಂತರ ಮಳೆ ಆಗುವುದರಿಂದ ನೀರನ್ನು ಯಾರೂ ಸಂಗ್ರಹಿಸಿ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ಈ ಭಾಗದಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ತರೀಕೆರೆ, ಕಡೂರು, ಅಜ್ಜಂಪುರ ಭಾಗದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಮನೆಗಳಲ್ಲಿ ನೀರನ್ನು ಶೇಖರಿಸಿ ಇಟ್ಟುಕೊಳ್ಳುತ್ತಾರೆ. ಚಿಕ್ಕಮಗಳೂರು ತಾಲೂಕಿನ ಕಳಾಸಾಪುರ ಗ್ರಾಮದ ಕೆಲವರಲ್ಲಿ ಡೆಂೆ ಕಾಣಿಸಿಕೊಂಡಿತ್ತು. ಇಲ್ಲಿ ವ್ಯಾಪಕ ಪ್ರಚಾರ ಮಾಡಿ ಹತೋಟಿಗೆ ತರಲಾಗಿದೆ. ಪ್ರಾಥಮಿಕ, ಸಮುದಾಯ ಆರೋಗ್ಯ, ಉಪ ಚಿಕಿತ್ಸಾ ಕೇಂದ್ರಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಅವರ ವ್ಯಾಪ್ತಿಯಲ್ಲಿ ಸರ್ವೇ ಮಾಡಿ ರೋಗ ಲಕ್ಷಣ ಇದ್ದವರನ್ನು ಕೂಡಲೇ ಚಿಕಿತ್ಸೆಗೆ ಒಳಪಡಿಸುತ್ತಾರೆ.
ರೋಗ ಲಕ್ಷಣಗಳು: ಜಿಲ್ಲೆಯ ಉಪ ಆರೋಗ್ಯ ಕೇಂದ್ರ, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಇತರೆ ದಿನಕ್ಕೆ ಹೊಲಿಕೆ ಮಾಡಿದರೆ ಕಳೆದ ಎರಡ್ಮೂರು ವಾರಗಳಿಂದ ಹೆಚ್ಚಾಗಿ ಜನ ಆಗಮಿಸುತ್ತಿದ್ದಾರೆ. ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಕೀಲುಗಳ ನೋವು, ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ರಕ್ತಸ್ರಾವ ಕಾಣಿಸಿಕೊಳ್ಳುವುದು ಡೆಂೆ ಲಕ್ಷಣ. ಈ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಸ್ವಚ್ಛತೆಯಿಂದಲೇ ನಿಯಂತ್ರಣ: ಡೆಂೆ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ಸ್ಥಳೀಯ ಸಂಸ್ಥೆಗಳಿಗೆ ಸೊಳ್ಳೆ ನಿರೋಧಕ ಔಷಧ ಸಿಂಪಡಣೆಗೆ ಸಲಹೆ ನೀಡಿದೆ. ನಿಂತ ನೀರಿನಲ್ಲಿ ಜನಿಸುವ ರೋಗವಾಹಕ ಸೊಳ್ಳೆಗಳು ಹೆಚ್ಚಾಗಿ ಹಗಲಿನಲ್ಲಿ ಕಚ್ಚುತ್ತವೆ. ಈಡೀಸ್ ಸೊಳ್ಳೆಯು ಶುದ್ಧ ನೀರಿನಲ್ಲಿ ಮೊದಲಿಗೆ ಮೊಟ್ಟೆ, ನಂತರ ಲಾರ್ವಾ, ಪ್ಯೂಪ ಪ್ರಕ್ರಿಯೆಯಲ್ಲಿ ಜೀವನಚಕ್ರ ಪೂರ್ಣಗೊಳಿಸಿ 10 ದಿನ ತೆಗೆದುಕೊಳ್ಳುತ್ತದೆ. ಇದರ ಕಚ್ಚುವಿಕೆಯಿಂದ ಡೆಂೆ ಮಾತ್ರವಲ್ಲದೆ ಚಿಕೂನ್‌ಗುನ್ಯಾ ಸಹ ಬರುತ್ತದೆ. ಸೊಳ್ಳೆಗಳ ನಿಯಂತ್ರಣದಿಂದ ಡೆಂೆ ಹರಡದಂತೆ ತಡೆಯಲು ಸಾಧ್ಯ. ಮನೆಗಳಲ್ಲಿ ನೀರು ಸಂಗ್ರಹಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿರುವ ತೊಟ್ಟಿಗಳು, ಡ್ರಂಗಳನ್ನು ಆಗಾಗ ಸ್ವಚ್ಛವಾಗಿಡಬೇಕು. ಇಲ್ಲವಾದಲ್ಲಿ ತೇವಾಂಶ ಹೆಚ್ಚಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಡೆಂೆ ಮತ್ತಿತರ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಇದರಿಂದಾಗಿ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಸಿಂಟೆಕ್ಸ್‌ಗಳನ್ನು ತಿಂಗಳಿಗೆ ಎರಡು ಬಾರಿ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಮನೆಗಳ ಸುತ್ತಮುತ್ತ ತ್ಯಾಜ್ಯದ ರಾಶಿ ಬೀಳದಂತೆ ಎಚ್ಚರ ವಹಿಸಬೇಕು.
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ನಿರ್ಲಕ್ಷೃ ತೋರದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳಬಹುದು. ಮುಖ್ಯವಾಗಿ ವೈಯಕ್ತಿಕ ಹಾಗೂ ಮನೆ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಡಿಎಚ್‌ಒ ಡಾ. ಎಚ್.ಎಸ್.ಅಶ್ವತ್ಥಬಾಬು.
ಡೆಂೆ ರೋಗ ಲಕ್ಷಣ ಇದ್ದವರ ರಕ್ತ ಪರೀಕ್ಷೆ ಮಾಡುತ್ತೇನೆ. ಐಜಿಎಂ ಮತ್ತು ಎನ್‌ಎಸ್-1 ವರದಿ ದೃಢಪಟ್ಟರೆ ಸೋಂಕಿತರು ಎಂದು ಪರಿಗಣಿಸಿ ಚಿಕಿತ್ಸೆ ಕೊಡಲಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಿಂದ ಸಾವು ಪ್ರಕರಣ ವರದಿಯಾಗಿಲ್ಲ ಎಂದು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಬಾಲಕೃಷ್ಣ ಅವರು ವಿಜಯವಾಣಿಗೆ ಮಾಹಿತಿ ನೀಡಿದರು.