ಮೃತ ಅಭ್ಯರ್ಥಿಗೆ 3381 ಮತ, ವೋಟ್ ಗಳಿಕೆಯಲ್ಲಿ 6 ನೇ ಸ್ಥಾನ

12
ಮೃತ ಅಭ್ಯರ್ಥಿ ರಾಜಾರೆಡ್ಡಿ
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿ, ನಿಧನರಾಗಿದ್ದ ರಾಜಾರೆಡ್ಡಿ 3,381 ಮತಗಳೊಂದಿಗೆ 6 ನೇ ಸ್ಥಾನ ಪಡೆದಿದ್ದಾರೆ.
ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ ರಾಜಾರೆಡ್ಡಿ (58) ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟಿದ್ದಾರು. ಆದರೂ, ಇವರ ನಾಮಪತ್ರ ಅಂಗೀಕಾರಗೊಂಡಿದ್ದ ಹಿನ್ನೆಲೆಯಲ್ಲಿ 29 ಅಭ್ಯರ್ಥಿಗಳ ಪೈಕಿ ರಾಜಾರೆಡ್ಡಿಯನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲಾಗಿತ್ತು. ವಿದ್ಯುನ್ಮಾನ ಮತ ಯಂತ್ರದಲ್ಲಿ ಹೆಸರನ್ನು ದಾಖಲಾಗಿಸಲಾಗಿತ್ತು. ಇವರು 3,381 ಮತಗಳನ್ನು ಪಡೆದಿದ್ದಾರೆ. ಇನ್ನು ಸ್ಪರ್ಧೆಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪೈಕಿ ಹಲವರಿಗಿಂತಲೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ರಾಜಕೀಯ ವಿವಿಧ ಪಕ್ಷಗಳ 9 ಮತ್ತು ಪಕ್ಷೇತರರು 20 ಸೇರಿದಂತೆ ಬರೋಬ್ಬರಿ 29 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net