ಕನ್ನಡ ಶಾಲೆ ಮುಚ್ಚುತ್ತಿರುವ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ಕೋಪಗೊಂಡ ನಟ ಜಗ್ಗೇಶ್

Jaggesh
Published on

ಬೆಂಗಳೂರು: ಆಂಧ್ರ ಪ್ರದೇಶದಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚಲು ಅಲ್ಲಿನ ಸರ್ಕಾರ ತೀರ್ಮಾನ ಮಾಡಿರುವುದಕ್ಕೆ ನಟ ಜಗ್ಗೇಶ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್​ರೆಡ್ಡಿ ಅವರು ಆಂಧ್ರದಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿ ನೋಟಿಸ್​ ನೀಡಿದೆ. ಇದಕ್ಕೆ ಜಗ್ಗೇಶ್​ ಅವರು ಟ್ವೀಟ್​ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಅನ್ಯ ರಾಜ್ಯದಲ್ಲಿ ಕನ್ನಡದ‌ ಪರಿಸ್ಥಿತಿ. ನಮ್ಮ ರಾಜ್ಯದಲ್ಲಿ ವಿಶಾಲ ಹೃದಯವಂತೆ, ಎಂಥ ದೌರ್ಭಾಗ್ಯ, ಭಾಷೆಗಾಗಿ ಸ್ವಾಭಿಮಾನ ಇಲ್ಲದ ಜನ ಶವಕ್ಕೆ ಸಮಾನ. ಕನ್ನಡದ ಬಂಧುಗಳೇ ನಮ್ಮ ಆದ್ಯತೆ ಇರಲಿ ಮೊದಲು ನಮ್ಮ ಭಾಷೆಗೆ. ಇನ್ನು ಮುಂದಾದರು ಕನ್ನಡಕ್ಕೆ ಕೈ ಎತ್ತು ನಿನ್ನ ಕೈಕಲ್ಪವೃಕ್ಷವಾಗುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net