

ಬೆಂಗಳೂರುಃ ನಗರದ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಗೋವಿಂದಪುರದಲ್ಲಿ ಕಳೆದ 7 ದಿನಗಳ ಹಿಂದೆ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ರಾತ್ರಿ ವೇಳೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ಬಾಲಕ ಜಾವೇದ್ ಮನೆಗೆ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದು ಭೇಟಿ ನೀಡಿ ಬಾಲಕನ ಪೋಷಕರಿಗೆ ಸಾಂತ್ವನವನ್ನು ಹೇಳಿದರು.
ಬಿಬಿಎಂಪಿಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷಕ್ಕೆ ಇನ್ನಷ್ಟು ಮಂದಿ ಬೆಂಗಳೂರಿಗರು ಬಲಿಯಾಗಬೇಕೂ ಗೊತ್ತಿಲ್ಲದಂತಾಗಿದೆ. ಈಗಾಗಲೇ ನೂರಾರು ಅಮಾಯಕರು ಬಲಿಯಾಗಿದ್ದಾರೆ.ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಸರ್ಕಾರವು ಕೂಡಲೇ ಬಾಲಕನ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಒತ್ತಾಯಿಸಿದರು.
ಪಕ್ಷದ ಮುಖಂಡರುಗಳಾದ ಮೋಹನ್ ದಾಸರಿ ,ಡಾ. ಸತೀಶ್, ಉಮೇಶ್ ಪಿಳ್ಳೆ ಗೌಡ ಸೇರಿದಂತೆ ಸ್ಥಳೀಯ ಮುಖಂಡರಾದ ಮರಿಯಾ ಹುಸೇನ್, ಖುದ್ರತುಲ್ಲ ಶರ್ೀ, ಯಾಸಿನ್ ಖೋಮೇನಿ, ಶಾಶಾವಲಿ ಹಾಗೂ ಅನೇಕ ಕಾರ್ಯಕರ್ತರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮನೆಯವರಿಗೆ ಸಾಂತ್ವನ ಹೇಳಿದರು.