ಗುಲಾಮಗಿರಿಯ ರಾಜ್ಯಪಾಲ ಕೂಡಲೇ ರಾಜೀನಾಮೆ ಕೊಟ್ಟು ತೊಲಗಲಿ - ಮುಖ್ಯಮಂತ್ರಿ ಚಂದ್ರು ಆಗ್ರಹ.

protest
Published on

ಬೆಂಗಳೂರು:ಕಳೆದ ಹತ್ತು ವರ್ಷಗಳಿಂದ ಸಾಕಷ್ಟು ಅವ್ಯವಹಾರಗಳಲ್ಲಿ, ಭ್ರಷ್ಟಾಚಾರಗಳಲ್ಲಿ ತೊಡಗಿಕೊಂಡಿರುವ ಪ್ರಧಾನಿ, ಗೃಹ ಸಚಿವರು ಸೇರಿ ಬಿಜೆಪಿಯ ಅನೇಕ ಕಡು ಭ್ರಷ್ಟರು ಈಗಲೂ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಯಾರ ಮೇಲೂ ಸಹ ಕಾನೂನು ಕ್ರಮಗಳು ಆಗುತ್ತಿಲ್ಲ. ಆದರೆ, ವಿರೋಧ ಪಕ್ಷಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಈ ರೀತಿಯ ಕೃತ್ಯಗಳು ಸಂಪೂರ್ಣ ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ವಿರೋಧಿಸಿ ಸಾಹಿತಿ ಮತ್ತು ಕಲಾವಿದರ ಬಳಗ ಇಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದೆಂಬ ಧೋರಣೆಯನ್ನು ಬಿಜೆಪಿ ಅನುಸರಿಸುತ್ತಿದೆ. ಇವರ ಧೋರಣೆಯಿಂದಾಗಿ ರಾಜ್ಯಪಾಲರ ಭವನ ಇಂದು ಗುಲಾಮಗಿರಿಗೆ ತಳ್ಳಲ್ಪಟ್ಟಿದೆ. ಈ ರೀತಿಯ ಗುಲಾಮಿ ಪ್ರವೃತ್ತಿಯ ರಾಜ್ಯಪಾಲರುಗಳು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಬಾರದು. ಕೂಡಲೇ ರಾಜ್ಯಪಾಲರು ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ್ರ ಆಗ್ರಹಿಸಿದರು.ಸಾಹಿತಿ ಡಾ.ಕೆ. ಮರಳುತ್ತಿದ್ದಪ್ಪ , ಡಾ. ಎಸ್. ಜೆ. ಸಿದ್ದರಾಮಯ್ಯ, ಇಂದಿರಮ್ಮ ಅರವಿಂದ ಮಾಲಗತ್ತಿ. ಲೀಲಾ ಸಂಪಿಗೆ ,ವಸುಂದರ ಭೂಪತಿ ಜಾಣಗೆರೆ ವೆಂಕಟರಾಮಯ್ಯ ,

ಕೆ.ಎಸ್. ನಾಗರಾಜ್ ಸೇರಿ ಅನೇಕ ಸಾಹಿತಿಗಳು, ಚಿಂತಕರು ಕಲಾವಿದರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net