

ಮಹರಾಷ್ಟ್ರ: ಕೋಳಿ ಸಾಂಬಾರ್ ( Chicken Meal ) ಮಾಡು ಅಮ್ಮ ಎಂದು ಹಠ ಮಾಡಿದ್ದಕ್ಕೆ ಮಹಿಳೆಯೊಬ್ಬಳು ತಮ್ಮ 7 ವರ್ಷದ ಮಗನನ್ನು ಲಟ್ಟಣಿಗೆಯಿಂದ ಹೊಡೆದು ಕೊಂದಿದ್ದಾಳೆ. ಈ ಘಟನೆ ಮಹರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಚಿನ್ಮಯ್ ಗಣೇಶ್ ಘುಮ್ಡೆ (7) ಮೃತ ಬಾಲಕ. ಪಲ್ಲವಿ ಘುಮ್ಡೆ (40) ಮಗನನ್ನು ಹೊಡೆದು ಕೊಂದ ಪಾಪಿ ತಾಯಿಯಾಗಿದ್ದಾಳೆ.ತನ್ನ ಕುಟುಂಬದೊಂದಿಗೆ ಕಾಶಿಪಾದ ಪ್ರದೇಶದ ಫ್ಲಾಟ್ನಲ್ಲಿ ವಾಸಿಸುತ್ತಿದ್ದಳು. ಮಗ ಚಿಕನ್ ಸಾರು ಕೇಳಿದ್ದಕ್ಕೆ ಹೊಡೆದು ಕೊಂದಿದ್ದಾಳೆ ಎನ್ನಲಾಗಿದೆ.
ನಡೆದಿದ್ದೇನು?:
ಮಹಿಳೆ ತನ್ನ ಗಂಡನಿಂದ ಬೇರ್ಪಟ್ಟು ತನ್ನ ಇಬ್ಬರು ಮಕ್ಕಳು ಮತ್ತು ಇಬ್ಬರು ಸಹೋದರಿಯರೊಂದಿಗೆ ಘೋರಿಲಾ ಕಾಂಪ್ಲೆಕ್ಸ್ನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಮಗ ಊಟಕ್ಕೆ ಕೋಳಿ ಮಾಂಸ ಕೇಳಿದ್ದ. ಇದರಿಂದ ಕೋಪಗೊಂಡ ತಾಯಿ ಚಪಾತಿ ಲಟ್ಟಿಸುವ ಮಣೆಯಿಂದ ಹೊಡೆಯಲು ಪ್ರಾರಂಭಿಸಿದಳು. ತಲೆ ಮತ್ತು ದೇಹದ ಮೇಲೆ ಗಾಯಗಳಾಗಿದ್ದರಿಂದ ಮಗುವಿನ ಸ್ಥಿತಿ ಹದಗೆಟ್ಟಿತು. ಗಂಭೀರ ಗಾಯಗಳಾಗಿದ್ದರೂ, ತಾಯಿ ತನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ, ತೀವ್ರ ರಕ್ತ ಸ್ರಾವವಾಗಿ ಮಗು ಮನೆಯಲ್ಲಿಯೇ ಸಾವನ್ನಪ್ಪಿತು.
ಮಕ್ಕಳ ಕಿರುಚಾಟ ಕೇಳಿದ ಸ್ಥಳೀಯ ನಿವಾಸಿಗಳು ಈ ಕೃತ್ಯವನ್ನು ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಮಹಿಳೆಯನ್ನು ತಕ್ಷಣ ಬಂಧಿಸಿ, ಹಲ್ಲೆಗೆ ಬಳಸಿದ ಚಪಾತಿ ಲಟ್ಟಿಸುವ ಲಟ್ಟಣಿಗೆಯನ್ನು ಅನ್ನು ವಶಪಡಿಸಿಕೊಂಡರು.
ಮೃತ ಮಗುವಿನ 10 ವರ್ಷದ ಸಹೋದರಿ ಕೂಡ ಭಯಭೀತಳಾಗಿರುವುದು ಕಂಡುಬಂದಿದೆ. ಪೊಲೀಸರು ಆಕೆಯನ್ನು ದಹನುವಿನ ಅನಾಥಾಶ್ರಮಕ್ಕೆ ಕಳುಹಿಸಿದ್ದಾರೆ. ಆರೋಪಿ ತಾಯಿ ತನ್ನ ಮಗನ ಸಾವಿಗೆ ಕಾರಣವೆಂದು ಒಪ್ಪಿಕೊಂಡಿದ್ದಾಳೆ.
ಮಗು ಹೊಡೆತದಿಂದ ಸಾವನ್ನಪ್ಪಿದೆಯೇ, ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆಯೇ ಅಥವಾ ಇನ್ನಾವುದಾದರೂ ಕಾರಣದಿಂದ ಸಾವನ್ನಪ್ಪಿದೆಯೇ ಎಂಬುದು ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಬಹಿರಂಗಗೊಳ್ಳಲಿದೆ.