

ಬಿಜ್ನೋರ್ (ಉತ್ತರ ಪ್ರದೇಶ): ಸಂಭ್ರಮ ನೆಲೆಸಬೇಕಿದ್ದ ಕಡೆ ಕೋಳಿ ಊಟದ ಸಂಬಂಧ ವಧು ಮತ್ತು ವರನ ಕಡೆಯವರ ನಡುವೆ ಜಗಳವಾಗಿ ಮದುವೆ ಮನೆಯು ರಣರಂಗವಾದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ಮದುವೆಗೆ ಬಂದವರು ಪರಸ್ಪರರ ಮೇಲೆ ದಾಳಿ ಮಾಡಿ ಮುಷ್ಟಿಯಿಂದ ಹೊಡೆದಾಡಿ ಇಡೀ ವಿವಾಹ ಸಮಾರಂಭದಲ್ಲಿ ಗೊಂದಲದ ವಾತಾವರಣ ಮೂಡಿದ ವಿಡಿಯೋ ದೃಶ್ಯವೊಂದು ವೈರಲ್ ಆಗಿದೆ. ಘಟನೆಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಚಿಕನ್ ಫ್ರೈ ಬಡಿಸುವ ವಿಚಾರದಲ್ಲಿ ಮದು ಮಗ ಮತ್ತು ಮದು ಮಗಳ ಕಡೆಯವರ ನಡುವೆ ಆರಂಭವಾದ ಜಗಳ ತೀವ್ರ ಸ್ವರೂಪ ಪಡೆದು ಕೊಂಡಿತು. ಸಮಾರಂಭದಲ್ಲಿದ್ದ ಕೆಲವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು. ನಂತರ, ಪೊಲೀಸ್ ರಕ್ಷಣೆಯಲ್ಲಿ ಮದುವೆ ಕಾರ್ಯ ಮುಕ್ತಾಯವಾಯಿತು.