

ತೆಲಂಗಾಣ; 400 ರೂ. ಅಲ್ಲ, 40 ರೂ. ಅಲ್ಲ ಬರೀ 4 ರೂ.ಗೆ ಚಿಕನ್ ಬಿರಿಯಾನಿ(biryani) ಸಿಗುತ್ತದೆ ಎಂದು ರೆಸ್ಟೋರೆಂಟ್ ಮಾಲೀಕರು ಘೋಷಣೆ ಮಾಡಿದ ಹಿನ್ನೆಲೆ ಇಲ್ಲಿನ ನರಸಿಪಟ್ಟಣ್ಣದಲ್ಲಿ 2.ಕಿ.ಮೀ ಸರದಿ ಸಾಲಲ್ಲಿ ನಿಂತು ಕಾಯುವ ಜನರ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ರೆಸ್ಟೋರೆಂಟ್ ಮಾಲೀಕರು ಈ ರೀತಿಯಲ್ಲಿ ಆಫರ್ ನೀಡಿದ ಬೆನ್ನಲ್ಲೆ ಇಡೀ ನರಸಿಪಟ್ಟಣ್ಣದಲ್ಲಿ ಸುದ್ದಿ ಹರಿದಾಡಿದೆ. ಈ ಹಿನ್ನೆಲೆ ಮುಂಜಾನೆಯಿಂದಲೇ ರೆಸ್ಟೋರೆಂಟ್ ಮುಂಭಾಗ 2 ಕಿ.ಮೀ ಉದ್ದಕ್ಕೂ ಸಾವಿರಾರು ಸೇರಿದ್ದಾರೆ. ಬಳಿಕ 10 ಗಂಟೆಯಿಂದ ಆರಂಭವಾದ ಈ ಆಫರ್ ಪ್ರಕ್ರಿಯೆ 12 ಗಂಟೆಯೊಳಗೆ ಮುಗಿದೆ. ಅಂದರೆ ಬರೀ 2 ತಾಸಿನಲ್ಲಿ 3 ಸಾವಿರ ಬಿರಿಯಾನಿ ಪೊಟ್ಟಣಗಳು ಖಾಲಿಯಾಗಿದೆ ಎಂದು ಹೇಳಲಾಗಿದೆ. ನರಸಿಪಟ್ಟಣದಲ್ಲಿ ಬಿರಿಯಾನಿ ಬಡಿಸುತ್ತಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಇದು ವ್ಯಾಪರ ಅಲ್ಲ, ಬಿರಿಯಾನಿ ಪ್ರೀಯರ ಭಾವನೆ ಹೀಗಾಗಿ, ಒಂದು ದಿನದ ಮಟ್ಟಿಗೆ ಭಾವನೆಗಳಿಗೆ ಅನುಗುಣವಾಗಿ ಅತ್ಯಂತ ಕಡಿಮೆ ದರದಲ್ಲಿ ಬಿರಿಯಾನಿ ಆಫರ್ಗಳನ್ನು ಘೋಷಿಸಿದ್ದೇವೆ ಎಂದು ಹೊಸ ರೆಸ್ಟೋರೆಂಟ್ ಮಾಲೀಕರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).