

ಉತ್ತರಪ್ರದೇಶ: ಜಮೀನಲ್ಲಿ ಕೆಲಸ ಮಾಡುವಾಗ ಕೊಯ್ಲು ಯಂತ್ರಕ್ಕೆ ಸಿಲುಕಿ ಗಂಭೀರ ಗಾಯಗಳು ಆಗಿದ್ದ ಬಾಲಕನ್ನು ಎಳೆದೊಯ್ದ ಕಿರಾತಕರು 17 ತುಂಡುಗಾಳಗಿ ಕತ್ತರಿಸಿ ಅದೇ ಹೊಲ್ಲದಲ್ಲಿ ಹೂತಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್ ಎನ್ನುವ ಪ್ರದೇಶದಲ್ಲಿ ಇತ್ತೀಚಿಗೆ ನಡೆದಿದ್ದು, ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.
ಬಹ್ರೈಚ್ನ ಗಾಯತ್ರಿ ನಗರ ನಿವಾಸಿ ವಿಕ್ರಮ್ (15) ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ. ಸಂಜಯ್ ವರ್ಮಾ ಮತ್ತು ಲವಕುಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ಡಿ.06ರಂದು ವಿಕ್ರಮ್, ಆರೋಪಿ ಸಂಜಯ್ ವರ್ಮಾಗೆ ಸಹಾಯಕನಾಗಿ ಜಮೀನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೆಲಸದ ಭರದಲ್ಲಿ ಕೊಯ್ಲು ಯಂತ್ರಕ್ಕೆ ಬಿದ್ದಿದ್ದು, ಗಂಭೀರ ಗಾಯಗಳಾಗಿವೆ. ಇದರಿಂದ ಭಯಭೀತರಾದ ಆರೋಪಿಗಳು ವಿಕ್ರಮ್ಗೆ ಸಹಾಯ ಮಾಡುವ ಬದಲು ಅದೇ ಯಂತ್ರದಿಂದ 17 ತುಂಡುಗಳಾಗಿ ಕತ್ತರಿಸಿ ಜಮೀನಿನ ತುಂಬಾ ಬೇರೆ ಬೇರೆ ಕಡೆ ಹೂಳಿದ್ದಾರೆ. ಬಳಿಕ ಈ ವಿಯಷ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ವಿಕ್ರಮ್ ಬಟ್ಟೆ ಮತ್ತು ಅವನ ವಸ್ತುಗಳನ್ನ ದೂರಲ್ಲಿನ ಗುಂಡಿಯೊಂದರಲ್ಲಿ ಬಿಸಾಡಿ(ಸಾಕ್ಷ್ಯನಾಶ) ಹೊರಟಿದ್ದಾರೆ ಎಂದು ಎಸ್ಪಿ ವೃಂದಾ ಶುಕ್ಲಾ ತಿಳಿಸಿದ್ದಾರೆ.
ಕಳೆದ 10 ದಿನಗಳಿಂದ ಕಾಣೆಯಾದ ಮಗನನ್ನು ಹುಡುಕಿದ ವಿಕ್ರಮ್ ಪಾಲಕರು ಕೊನೆಗೆ ಪೊಲೀಸ್ ಠಾಣೆ ಮೇಟ್ಟಿಲೆರಿ ಡಿ.09ರಂದು ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ವಿಕ್ರಮ್ನ ಬಟ್ಟೆ ಮತ್ತು ಅವನ ವಸ್ತುಗಳು ಪತ್ತೆ ಹಚ್ಚಿದ್ದಾರೆ. ಬಳಿಕ ಜಮೀನಿಗೆ ಸಂಬಂಧಿಸಿದವರ ಮತ್ತು ಊರಿನ ಜನರ ಮೂಲಕ ಮಾಹಿತಿ ಕಲೆ ಹಾಕಿ ಕೊನೆಗೂ ಇಬ್ಬರ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ಸಮಯದಲ್ಲಿ ಇಬ್ಬರು ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಇಬ್ಬರ ಮೇಲೆ ಕೊಲೆ ಮತ್ತು ಸಾಕ್ಷ್ಯನಾಶದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎದು ಎಸ್ಪಿ ತಿಳಿಸಿದ್ದಾರೆ.(ಏಜೆನ್ಸೀಸ್).