ಛತ್ತೀಸಗಢ: ಎನ್​ಕೌಂಟರ್​ನಲ್ಲಿ ಐದು ನಕ್ಸಲರ ಹತ್ಯೆ

ನಕ್ಸಲ್
Published on

ಬಿಜಾಪುರ: ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರಾತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್​ಕೌಂಟರ್​ನಲ್ಲಿ ಇಬ್ಬರು ಮಹಿಳಾ ನಕ್ಸಲರು ಸೇರಿದಂತೆ ಮತ್ತು ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಬಸಗುಡ ಪೊಲೀಸ್​ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 7.30 ಗಂಟೆ ಸುಮಾರಿಗೆ ಎನ್ಕೌಂಟರ್ ಆರಂಭವಾಗಿತ್ತು ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಿಭಾಗೀಯ ಸಮಿತಿ ಸದಸ್ಯ ವಿನೋದ್​​ ಕರ್ಮಾ, ಆವಪಲ್ಲಿ ಎಲ್​ಒಎಸ್​ ರಾಜು ಪುಣೆಂ, ಎಸಿಎಂ ವಿಶ್ವನಾಥ್​, ಗುಡ್ಡಂ ತೇಲಂ ಸೇರಿದಂತೆ 20 ರಿಂದ 25 ಮಂದಿ ನಕ್ಸಲರು ಇರುವ ಬಗ್ಗೆ ಮಾಹಿತಿ ಲಭಿಸಿದೆ.

ಛತ್ತೀಗಢ ಪೊಲೀಸ್​ ಮತ್ತು ಕೋಬ್ರಾ ಘಟಕದ ಜಂಟಿ ತಂಡ ಕಾರ್ಯಚರಣೆ ನಡೆಸಿತು. ಏತನ್ಮಧ್ಯೆ ಭದ್ರತಾ ಪಡೆಗಳು ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ಶೋಧಾ ಕಾರ್ಯ ನಡೆಸುತ್ತಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net