ಛಂಗೂರ್ ಬಾಬಾ ಸಂಘಟನೆಯ ಲೆಟರ್ ಹೆಡ್​​ನಲ್ಲಿ ಪ್ರಧಾನಿ ಮೋದಿ ಹೆಸರು ಉಲ್ಲೇಖ! | Chhangur Baba

baba
Published on

Chhangur Baba: ಮತಾಂತರ ದಂಧೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಛಂಗೂರ್ ಬಾಬಾ, ಅಧಿಕಾರಿಗಳ ವಿಚಾರಣೆಯ ವೇಳೆ ತನ್ನನ್ನು ತಾನು RSS ನ ಹಿರಿಯ ಕಾರ್ಯಕರ್ತನೆಂದು ಬಿಂಬಿಸಿಕೊಂಡಿದ್ದ. ಅಲ್ಲದೆ, ಸಂಘಟನೆಗೆ ಸಂಬಂಧಿಸಿದ ಲೆಟರ್‌ಹೆಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಸಹ ಬಳಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಛಂಗೂರ್ ಬಾಬಾ ಭಾರತ್ ಪ್ರತಿಕಾರ್ಥ್ ಸೇವಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ, ಈ ಸಂಸ್ಥೆಯನ್ನು ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಈದುಲ್ ಇಸ್ಲಾಂ ನಡೆಸುತ್ತಿದ್ದ ಎನ್ನಲಾಗಿದೆ. ಆರೆಸ್ಸೆಸ್ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಲು ಈ ಸಂಘಟನೆಯ ಹೆಸರನ್ನು ಆಯ್ಕೆ ಮಾಡಲಾಗಿದ್ದು, ಆರೆಸ್ಸೆಸ್‌ನ ಪ್ರಧಾನ ಕಚೇರಿ ನಾಗ್ಪುರದಲ್ಲಿ ಇರುವುದರಿಂದ ಸಂಘಟನೆಯ ವಿಶ್ವಾಸಾರ್ಹತೆ ಬಿಂಬಿಸಲು ನಕಲಿ ಕೇಂದ್ರವನ್ನು ಸ್ಥಾಪಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ಮತ್ತು ರಾಜಕೀಯ ನಾಯಕರೊಂದಿಗಿನ ಸಭೆಗಳಲ್ಲಿ ಛಂಗೂರ್ ಬಾಬಾ ಮತ್ತು ಈದುಲ್ ಇಸ್ಲಾಂ, ತಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಲು ಪ್ರಮುಖ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಹೆಸರಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಛಂಗೂರ್ ಬಾಬಾ ಆರೋಪವೇನು?

ವಿದೇಶಿ ನಿಧಿಯ ಸಹಾಯದಿಂದ ಭಯೋತ್ಪಾದಕ ತರಭೇತಿ ಕೇಂದ್ರ ಸ್ಥಾಪಿಸಲು ಮತ್ತು ಹಿಂದು ಯುವತಿಯರನ್ನು ಮತಾಂತರ ಮಾಡಲು ಸಂಚು ರೂಪಿಸುತ್ತಿದ್ದ ಮತ್ತು ಆತ ಪಾಕಿಸ್ತಾನ, ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿದೇಶಿ ಮೂಲಗಳಿಂದ 500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದಿದ್ದಾನೆ ಎಂದು ಛಂಗೂರ್ ಬಾಬಾ ವಿರುದ್ಧ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರೋಪಿಸಿದೆ.(ಏಜೆನ್ಸೀಸ್­)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net