ಹಳೇ ಸೊರಬ ಶಾಲೆಗೆ ಡಿಮಾಂಡ್

15sor4
ಹಳೇ ಸೊರಬದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.
Published on

ಶಿವಪ್ಪ ಹಿತ್ಲರ್, ಸೊರಬ ಪ್ರಸ್ತುತ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪಾಲಕರು ಹಿಂದೇಟುಹಾಕುತ್ತಾರೆ. ಆದರೆ ಹಳೇ ಸೊರಬ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ (ಪಿಎಂಶ್ರೀ) ಶಾಲೆಯಲ್ಲಿ ಗಣ್ಯ ವಕ್ತಿಗಳೇ ಶಿಾರಸು ಮಾಡಿದರೂ ಸೀಟು ಸಿಗುವುದು ಕಷ್ಟವಾಗಿದೆ! ಪಟ್ಟಣದ ಆನವಟ್ಟಿ ರಸ್ತೆಯಲ್ಲಿರುವ ಹಳೇ ಸೊರಬ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 7ನೇ ತರಗತಿವರೆಗೆ ಶಿಕ್ಷಣ ದೊರೆಯುತ್ತಿದೆ. ಈ ಶಾಲೆಯಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಪಾಲಕರು ಮುಗಿಬೀಳುತ್ತಾರೆ. ಆದರೆ ಈ ಬಾರಿ ಸೀಟ್ ಸಿಗದೆ ಬಹಳಷ್ಟು ಪಾಲಕರು ನಿರಾಶರಾಗಿದ್ದಾರೆ. ಈ ಶಾಲೆಗೆ ಪ್ರವೇಶ ಪಡೆಯಲು ಬೇಡಿಕೆ ಹೆಚ್ಚಾಗಿದ್ದನ್ನು ಗಮನಿಸಿದ ಸರ್ಕಾರ ಒಂದನೇ ತರಗತಿಯ ಮಕ್ಕಳ ಸಂಖ್ಯೆಯನ್ನು 30ರಿಂದ 40 ಹೆಚ್ಚಿಸಿದೆ. ಇದರಿಂದ ಮಕ್ಕಳಿಗೆ ಕೂರಲು ಕೊಠಡಿ ಕೊರತೆ ಉಂಟಾಗಿದೆ. ಇದರ ನಡುವೆ ಮಕ್ಕಳ ಸಂಖ್ಯೆ 300ಕ್ಕಿಂತ ಅಕವಾದರೆ ಪಿಎಂಶ್ರೀ ಯೋಜನೆಯ ಸೌಲಭ್ಯ ಸಿಗದಿರುವ ಭೀತಿಯೂ ಎದುರಾಗಿದೆ. ಶಾಲೆಯಲ್ಲಿ ಈಗಾಗಲೇ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು 5ನೇ ತರಗತಿ ಮಕ್ಕಳು ಕೂರಲು ಕೊಠಡಿ ಇಲ್ಲದೆ ಶಿಕ್ಷಕರು ಕೂರುವ ಕೊಠಡಿಯಲ್ಲೇ ಹಲವು ಸಾಮಗ್ರಿ ಇರಿಸಲಾಗಿದೆ. ಇಕ್ಕಟ್ಟಾದ ಜಾಗದಲ್ಲಿಯೇ ಪಾಠ ಕೇಳುವ ಅನಿವಾರ್ಯತೆ ಉಂಟಾಗಿದೆ. ಅಲ್ಲದೆ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. 8 ಕೊಠಡಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಇನ್ನೂ 3 ಕೊಠಡಿಗಳ ಅಗತ್ಯವಿದೆ. ಕೊಠಡಿ ಜತೆ ಶಿಕ್ಷಕರ ಕೊರತೆಯಿದೆ. ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ ಪಾಠ ಮಾಡುವುದರಿಂದ ಹಾಗೂ ಕನ್ನಡ- ಆಂಗ್ಲ ಮಾಧ್ಯಮ ಇರುವುದರಿಂದ ಮಕ್ಕಳನ್ನು ಸೇರಿಸಲು ಪಾಲಕರಿಂದ ಬೇಡಿಕೆ ಹೆಚ್ಚಾಗಿದೆ. ಪಟ್ಟಣದ ಅಕ್ಕಪಕ್ಕದ ಗ್ರಾಮಗಳು, ತಾಲೂಕಿನ ದೂರದ ಊರುಗಳಿಂದಲೂ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪಾಲಕರು ಮುಗಿಬಿದ್ದಿದ್ದಾರೆ.

ರಾಜಕಾರಣಿಗಳ ಶಿಫಾರಸು ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಸೀಟು ಸಿಗದಿದ್ದರೆ ರಾಜಕಾರಣಿಗಳು, ನಾಯಕರು, ಅಕಾರಿಗಳಿಂದ ಶಿಾರಸು ಮಾಡಿಸಿದ್ದಾರೆ. ಆದರೂ ಸೀಟು ಸಿಕ್ಕಿಲ್ಲ. ಶಾಲೆಗೆ ಎಷ್ಟು ಬೇಡಿಕೆ ಇದೆ ಎಂದರೆ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ಮುಖ್ಯ ಶಿಕ್ಷಕರಿಗೆ ದೂರವಾಣಿ ಮೂಲಕ ಮಾತನಾಡಿ ಒಂದನೇ ತರಗತಿಗೆ ಒಂದು ಸೀಟು ಅವಕಾಶ ಇದ್ದರೆ ಪರಿಗಣಿಸಿ ಎಂದು ಕೋರಿದ್ದಾರೆ. ಅಲ್ಲದೆ ಸಚಿವರ ವಿಶೇಷ ಅಕಾರ ಪರಿಗಣಿಸಿ ಸೀಟು ನೀಡುವಂತೆ ಒಬ್ಬ ಸಚಿವ ಕೂಡ ಒತ್ತಾಯಿಸಿದ್ದಾರೆ. ಇರುವುದೊಂದೇ ಶೌಚಗೃಹ ಪಟ್ಟಣದ ಹಳೇ ಸೊರಬ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಪಿಎಂಶ್ರೀ) ಸೀಟಿಗೆ ಬೇಡಿಕೆಯೇನೋ ಇದೆ. ಆದರೆ ಶಾಲೆಯಲ್ಲಿ ಪ್ರತ್ಯೇಕ ಶೌಚಗೃಹ ಇಲ್ಲದಂತಾಗಿದೆ. ಇತ್ತೀಚೆಗೆ ಕಾರಣಾಂತರದಿಂದ ಒಂದನ್ನು ತೆರವು ಮಾಡಿದ್ದರಿಂದ ಬಾಲಕರಿಗೆ ಶೌಚಗೃಹ ಇಲ್ಲದಂತಾಗಿದೆ. 300 ಮಕ್ಕಳಿಗೆ ಒಂದೇ ಶೌಚಗೃಹ ಇರುವುದರಿಂದ ಸಮಸ್ಯೆ ಉಂಟಾಗಿದೆ. ಶೀಘ್ರವೇ ಸೌಲಭ್ಯ ಕಲ್ಪಿಸಬೇಕಾದ ಅನಿವಾರ್ಯತೆಯಿದೆ. ಗಮನಹರಿಸಲಿ ಶಿಕ್ಷಣ ಸಚಿವ ಶಾಲೆಯಲ್ಲಿ ಎಸ್‌ಡಿಎಂಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪದಾಕಾರಿಗಳ ಶ್ರಮವಹಿಸಿ ದಾನಿಗಳು ಹಾಗೂ ಪಾಲಕರಿಂದ ಹಣ ಸಂಗ್ರಹಿಸಿ ತಗಡಿನ ಶೀಟ್ ಅಳವಡಿಸಿ ತಾತ್ಕಾಲಿಕವಾಗಿ ತರಗತಿ ನಡೆಸಲು ಹಾಗೂ ಊಟಮಾಡಲು ವ್ಯವಸ್ಥೆ ಮಾಡಲಾಗಿದೆ. ಬೇಡಿಕೆ ಇರುವ ಶಾಲೆಗೆ ಕೊಠಡಿಗಳು, ಶಿಕ್ಷಕರು, ಶೌಚಗೃಹ, ದಾಸೋಹ ಕೊಠಡಿ, ಮೈದಾನ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಬೇಕಾದ ಹೊಣೆಗಾರಿಕೆ ಇದೇ ಕ್ಷೇತ್ರದ ಶಾಸಕ, ಶಿಕ್ಷಣ ಸಚಿವರೂ ಆದ ಮಧು ಬಂಗಾರಪ್ಪ ಅವರ ಮೇಲಿದೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕರೆ ಬೇಡಿಕೆ ಹೆಚ್ಚಾಗುವುದು ಸಹಜ. ಅದರಂತೆ ಶಾಸಕರ ಮಾದರಿಯ ಈ ಶಾಲೆಗೆ ಹೆಚ್ಚಿನ ಬೇಡಿಕೆ ಇದೆ. ಶಾಲೆಗೆ ಶಿಕ್ಷಕರು ಹಾಗೂ ಕೊಠಡಿಗಳ ಅಗತ್ಯವಿದೆ. ಸುಸಜ್ಜಿತ ಶೌಚಗೃಹ ನಿರ್ಮಾಣಕ್ಕೆ ಶಾಸಕರು 20 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಒಂದನೇ ತರಗತಿಗೆ ಹೆಚ್ಚಿನ ಬೇಡಿಕೆ ಇದೆ. ಈ ಶಾಲೆಯಲ್ಲಿ ಸೀಟು ಕೊಡುವಂತೆ ಪ್ರತಿಷ್ಠಿತ ವ್ಯಕ್ತಿಗಳು ಶಿಾರಸು ಮಾಡಿದ್ದಾರೆ. ಆದರೆ ಸರ್ಕಾರದ ನಿಯಮಾವಳಿಯಂತೆ ಮಕ್ಕಳ ಸಂಖ್ಯೆ ನಿಗದಿಗೊಳಿಸಲಾಗಿದೆ. ಅದರಂತೆ ಮಕ್ಕಳನ್ನು ದಾಖಲು ಮಾಡಿಕೊಂಡಿದ್ದೇವೆ. ಈ ಶಾಲೆಗೆ ಮೂಲ ಸೌಕರ್ಯ ಕೊರತೆಯಿದೆ. ಗಣಪತಿ ಹಳೇ ಸೊರಬದ ಶಾಸಕರ ಸರ್ಕಾರಿ ಮಾದರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರಿಂದ ಹೆಚ್ಚಿನ ಬೇಡಿಕೆ ಇದೆ. ಕೊಠಡಿಗಳ ಕೊರತೆಯಿದೆ. ವಿವೇಕ ಯೋಜನೆಯಡಿ 2 ಹಾಗೂ ಪಿಎಂಶ್ರೀ ಯೋಜನೆಯಡಿ 1 ಕೊಠಡಿ ಮುಂಜೂರಾಗಿದೆ. ಟೆಂಡರ್‌ಪ್ರಕ್ರಿಯೆ ಬಾಕಿ ಇದೆ. ಪುಷ್ಪಾ, ಕ್ಷೇತ್ರ ಶಿಕ್ಷಣಾಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net