ಪ್ರಾಂಶುಪಾಲಾರೇ ಹೀಗಾದ್ರೆ ವಿದ್ಯಾರ್ಥಿಗಳ ಕಥೆಯೇನು? ಈ ಚೆಕ್​ನಲ್ಲೇ ದೋಷವಿದೆ! ಇಲ್ಲಿದೆ ನೋಡಿ ವೈರಲ್​ ಫೋಟೋ | Viral Cheque

ವಿಜಯವಾಣಿ (4)
Published on

Viral Cheque: ಸಾಮಾಜಿಕ ಜಾಲತಾಣ ಅಂದಮೇಲೆ ಇಂತಹ ವಿಷಯಗಳು ಮಾತ್ರ ವೈರಲ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ವಿಚಿತ್ರ, ವಿಶೇಷ, ವಿಭಿನ್ನ ಮತ್ತು ನಗೆಪಾಟಲಿಗೀಡಾಗುವ ಯಾವುದೇ ವಿಚಾರಗಳು ಅಥವಾ ದೃಶ್ಯಗಳು ಕ್ಷಣಮಾತ್ರದಲ್ಲಿ ಹರಿದಾಡುತ್ತವೆ. ಅದರಲ್ಲೂ ಇತ್ತೀಚನ ದಿನಗಳಲ್ಲಿ ಶಾಲಾ-ಕಾಲೇಜು ವಾರ್ಷಿಕ ಶುಲ್ಕ, ಸ್ಕೂಲ್ ಬಸ್​ನಲ್ಲಿ ಹೋಗಲು ದುಬಾರಿ ಮೊತ್ತ ಸೇರಿದಂತೆ ಸಣ್ಣ ಸಣ್ಣ ವಿಷಯಗಳು ಸಖತ್​ ಸದ್ದು ಮಾಡಿವೆ. ಅದೇ ರೀತಿ ಇಲ್ಲೊಂದು ಫೋಟೋ ವೈರಲ್ ಆಗಿದ್ದು, ಪ್ರಾಂಶುಪಾಲರು ಬರೆದ ಚೆಕ್​ ನೆಟ್ಟಿಗರ ಖುಷಿಗೆ ಕಾರಣವಾಗಿದೆ.

ಶಾಲಾ-ಕಾಲೇಜುಗಳಲ್ಲಿ ಕೆಲವೊಂದು ಉದ್ದೇಶಪೂರ್ವಕವಾಗಿ ಮಾಡಿದ್ದಾದರೆ, ಇನ್ನೂ ಕೆಲವು ಸಣ್ಣ ಎಡವಟ್ಟಿನಿಂದ ವೈರಲ್​ಗೆ ಕಾರಣವಾಗಿರುತ್ತವೆ. ಅಸಲಿಗೆ ಹಿಮಾಚಲ ಪ್ರದೇಶದ ಸಿರಮೌರ್​ನ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು, 7,616 ರೂ. ಚೆಕ್​ಗೆ ಹಾಕಿದ ಸಹಿ ಸದ್ಯ ನೆಟ್ಟಿಗರ ಕಣ್ಣಂಚಲ್ಲಿ ಹಾಸ್ಯದ ನೀರು ತಂದಿದೆ. ಅಷ್ಟಕ್ಕೂ ಅದರಲ್ಲಿ ಆದ ಎಡವಟ್ಟೇನು? ನಗುವಂತ ರೀತಿಯಲ್ಲಿ ಮಾಡಿದ್ದೇನು? ಎಂಬ ಪ್ರಶ್ನೆಗೆ ಉತ್ತರವೇ ತಪ್ಪು ತಪ್ಪಾಗಿ ಬರೆದ ಅಕ್ಷರಗಳು.

7,616 ರೂ. ಅನ್ನು ಚೆಕ್​ನಲ್ಲಿ ಅಕ್ಷರಗಳಲ್ಲಿ ಬರೆಯಬೇಕು. ಇದನ್ನು ಆಂಗ್ಲದಲ್ಲಿ 'Seven Thousand Six Hundred Sixteen Rupees Only’ ಎಂದು ಬರೆಯಬೇಕು. ಆದರೆ, ಪ್ರಾಂಶುಪಾಲರು, 'Saven Thursday Six Harendra Sixty Rupees Only’ ಎಂದು ಬರೆದು, ಸಹಿ ಹಾಕಿಕೊಟ್ಟಿದ್ದಾರೆ. ಈ ಚೆಕ್​ ನೋಡಿದ ಶಾಲೆಯ ಸಿಬ್ಬಂದಿಯೊಬ್ಬರು, ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಷಗಳಲ್ಲಿ ವೈರಲ್ ಆದ ಫೋಟೋಗೆ ನೆಟ್ಟಿಗರು ವ್ಯಾಪಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಹೇಗೆ ಒಬ್ಬ ಪ್ರಾಂಶುಪಾಲರು ಹೀಗೆ ತಪ್ಪಾಗಿ ಬರೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವರದಿಗಳ ಪ್ರಕಾರ, ಚೆಕ್ ಅನ್ನು ಬ್ಯಾಂಕ್ ತಿರಸ್ಕರಿಸಿದೆ. ಮತ್ತು ಶಾಲೆಯು ಸರಿಪಡಿಸಿದ ಚೆಕ್ ನೀಡುವಂತೆ ಸೂಚಿಸಲಾಗಿದೆ. ಆದರೆ, ಶಾಲೆಯ ಹೆಸರಿಗೆ ಈಗಾಗಲೇ ಡ್ಯಾಮೇಜ್ ಆಗಿದ್ದು, ಚೆಕ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net