

gifts : ಚೆನ್ನೈ ಮೂಲದ ಟೆಕ್ ಸ್ಟಾರ್ಟ್ಅಪ್ ಅಜಿಲೇಷಿಯಮ್ ( Chennai-based technology solutions provider Agilisium) ಕನ್ಸಲ್ಟಿಂಗ್ ತನ್ನ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನ ತಂಡಕ್ಕೆ ಬಂಪರ್ ಆಫರ್ ನೀಡಿದೆ.
ಕಂಪನಿಯು ತನ್ನ ಆರಂಭದಿಂದಲೂ ಕಂಪನಿಯೊಂದಿಗೆ ಸಂಬಂಧ ಹೊಂದಿರುವ 25 ನಿಷ್ಠಾವಂತ ಉದ್ಯೋಗಿಗಳಿಗೆ ಹೊಸ ಹುಂಡೈ ಕ್ರೆಟಾ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದೆ. ಎಲ್ಲಾ ವಾಹನಗಳು ಬಿಳಿ ಬಣ್ಣದಲ್ಲಿರುತ್ತವೆ. ವಿಶೇಷವೆಂದರೆ ಪ್ರತಿ ಎಸ್‌ಯುವಿಯ ನಂಬರ್ ಪ್ಲೇಟ್‌ನಲ್ಲಿ ಉದ್ಯೋಗಿಯ ಹೆಸರನ್ನು ಬರೆಯಲಾಗಿದೆ. ಈ ಎಸ್‌ಯುವಿ ಕಾರಿನ ಬೆಲೆ ರೂ. 20.50 ಲಕ್ಷದವರೆಗೆ ಇದೆ.