

ಚೆನ್ನೈ: ಸುಮಾರು 700 ಟನ್ ಅಮೋನಿಯಂ ನೈಟ್ರೇಟ್ ಸಂಗ್ರಹ ಚೆನ್ನೈನ ಜನರ ಆತಂಕಕ್ಕೆ ಕಾರಣವಾಗಿದೆ. ಲೆಬನಾನ್ ರಾಜಧಾನಿ ಬೈರೂತ್ ಬಂದರಿನಲ್ಲಿ ದಾಸ್ತಾನು ಮಾಡಲಾಗಿದ್ದ ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್ ಮಂಗಳವಾರ ಸ್ಪೋಟಗೊಂಡು 135 ಜನರು ಮೃತಪಟ್ಟು, ಸಾವಿರಾರು ಜನರು ಗಾಯಗೊಂಡಿದ್ದರು.
ತಮಿಳುನಾಡು ರಾಜಧಾನಿ ಚೆನ್ನೈನ ಹೊರವಲಯದಲ್ಲಿ ಕಸ್ಟಮ್್ಸ ಇಲಾಖೆಯ ಸುಪರ್ದಿಯಲ್ಲಿ 700 ಟನ್ಗಳಷ್ಟು ರಾಸಾಯನಿಕ ಸಂಗ್ರಹವಿದೆ. ಸಿಡಿಮದ್ದು ಹಾಗೂ ರಸಗೊಬ್ಬರ ತಯಾರಿಕೆಯಲ್ಲಿ ಅಮೋನಿಯಂ ನೈಟ್ರೇಟ್ ಬಳಸಲಾಗುತ್ತದೆ. ಭಾರತದ ಬೃಹತ್ ಪಟಾಕಿ ತಯಾರಿಕೆ ಕೇಂದ್ರವಾದ ಶಿವಕಾಶಿಯ ಒಂದು ಸಂಸ್ಥೆ 2015ರಲ್ಲಿ ಅಕ್ರಮವಾಗಿ ತರಿಸಿಕೊಂಡಿದ್ದ ಈ ರಾಸಾಯನಿಕವನ್ನು ಜಫ್ತಿ ಮಾಡಲಾಗಿತ್ತು. ಅಂದಿನಿಂದಲೂ ಅದನ್ನು ಅಲ್ಲೇ ಇರಿಸಲಾಗಿದೆ.
ಶ್ರೀ ಅಮ್ಮಾನ್ ಕೆಮಿಕಲ್ಸ್ ಅಕ್ರಮವಾಗಿ ತರಿಸಿಕೊಂಡಿದ್ದ 697 ಟನ್ ಅಮೋನಿಯಂ ನೈಟ್ರೇಟ್ನ್ನು ಸತ್ವಾ ಕಂಟೇನರ್ ಡಿಪೋದಲ್ಲಿ ಇಡಲಾಗಿದೆ. ಅದನ್ನು ಶೀಘ್ರವೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಸ್ಟಮ್್ಸ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.