

ಚೆನ್ನೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅನೇಕ ಕಲಾಭಿಮಾನಿಗಳು ತಮ್ಮ ಕಲೆಯ ಮೂಲಕ ಟ್ರಂಪ್ಗೆ ಸ್ವಾಗತ ಕೋರಿದ್ದಾರೆ. ಮರಳಿನಲ್ಲಿ ಆರ್ಟ್, ಕಲ್ಲಂಗಡಿ ಹಣ್ಣಿನಲ್ಲಿ ಟ್ರಂಪ್ನ ಚಿತ್ರವನ್ನೆಲ್ಲ ಬಿಡಿಸಿ ಟ್ರಂಪ್ ಮತ್ತು ಮೋದಿ ಬಗ್ಗೆ ತಮಗಿರುವ ಪ್ರೀತಿ, ಅಭಿಮಾನವನ್ನು ತೋರಿಸಿಕೊಂಡಿದ್ದಾರೆ. ಇದೇ ರೀತಿಯಲ್ಲಿ ಚೆನ್ನೈನ ಒಬ್ಬ ವ್ಯಕ್ತಿ ಬರೋಬ್ಬರಿ 107ಕೆ.ಜಿ ತೂಕದ ಇಡ್ಲಿಯನ್ನು ತಯಾರಿಸಿ ಟ್ರಂಪ್ಗೆ ಸ್ವಾಗತ ಕೋರಿದ್ದಾರೆ.
ಚೆನ್ನೈನ ಫುಡ್ ಡೆಕೋರೇಟರ್ ಒಬ್ಬ ಇಡ್ಲಿಯಲ್ಲಿ ಡೊನಾಲ್ಡ್ ಟ್ರಂಪ್, ಮೋದಿ ಮತ್ತು ಎರಡು ರಾಷ್ಟ್ರಗಳ ಧ್ವಜವನ್ನು ಮೂಡಿಸಿದ್ದಾನೆ. 107 ಕೆ.ಜಿ ತೂಕವಿರುವ ಈ ಮೂರು ಇಡ್ಲಿಗಳನ್ನು ಮಾಡಲು ಇವನ ಜತೆ ಆರು ಜನರು ತಂಡವೊಂದು ಒಟ್ಟು 36 ತಾಸುಗಳ ಕಾಲ ಕೆಲಸ ಮಾಡಿದೆ.
ಈ ಇಡ್ಲಿಗಳ ಫೋಟೋವನ್ನು ನ್ಯಾಚುರಲ್ ಡಯೆಟ್ ಥೆರಫಿ ಸೆಂಟರ್ನವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)