ಆನ್​ಲೈನ್​ನಲ್ಲಿ ಕೆಮಿಸ್ಟ್ರಿ ಕಲಿಸೋಕೆ ಶಿಕ್ಷಕಿಯ ಸರ್ಕಸ್​...!

Chemistry Teacher
Published on

ಪುಣೆ: ಶಾಲಾ- ಕಾಲೇಜುಗಳ ಆರಂಭವಾಗಿಲ್ಲ. ಆದರೆ, ಪರೀಕ್ಷೆಯ ದಿನಾಂಕ ನಿಗದಿಯಾಗಿವೆ. ಹೀಗಾಗಿ ಶಿಕ್ಷಕರು ತಾವಿದ್ದಲ್ಲಿಂದಲೇ ಮಕ್ಕಳಿಗೆ ಪಾಠ ಮಾಡಬೇಕಾದುದು ಅನಿವಾರ್ಯವಾಗಿದೆ. ಜತೆ, ಆನ್​ಲೈಲ್​ ಬೋಧನೆಯನ್ನು ಶಾಲೆಗಳು ಕೂಡ ಕಡ್ಡಾಯಗೊಳಿಸಿವೆ.

ಲಾಕ್​ಡೌನ್​ ತೆರವಾದರೂ ಶಾಲೆ-ಕಾಲೇಜುಗಳ ಆರಂಭ ಇನ್ನೂ ಅನಿಶ್ಚತತೆಯಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿಯೇ ಪಾಠ ಹೇಳಲಾಗುತ್ತಿದೆ. ಆದರೆ, ಇದಕ್ಕೆ ಅಗತ್ಯ ಸಲಕರಣೆಗಳು ಎಲ್ಲರ ಬಳಿಯೂ ಇಲ್ಲ. ಸ್ಮಾರ್ಟ್​ಫೋನ್​ನಲ್ಲಿಯೇ ಕೆಲಸ ನಿರ್ವಹಿಸಬೇಕಾಗಿದೆ.

ಪುಣೆಯ ಬಿ. ಮೌಮಿತಾ ಮಕ್ಕಳಿಗೆ ಕೆಮಿಸ್ಟ್ರಿ ಕಲಿಸಲು ಮಾಡಿದ ಸರ್ಕಸ್​ ಇದೆಯಲ್ಲ.... ನೆಟ್ಟಿಗರ ಮನಸೂರೆಗೊಂಡಿದೆ. ಶಿಕ್ಷಕಿಯ ವೃತ್ತಿ ಬದ್ಧತೆ, ಸೃಜನಶೀಲತೆ ಹಾಗೂ ವಿನೂತನ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಇತರರಿಗೂ ಮಾದರಿ ಎಂದು ಹೇಳಿದ್ದಾರೆ.

ಛಾವಣಿಯಲ್ಲಿ ಎರಡು ದಾರವನ್ನು ಇಳಿಬಿಟ್ಟು ಅದಕ್ಕೆ ಬಟ್ಟೆಯ ನೇತು ಹಾಕುವ ಹ್ಯಾಂಗರ್​ ಕಟ್ಟಿದ್ದಾರೆ. ಆ ಹ್ಯಾಂಗರ್​ನ ಮಧ್ಯದಲ್ಲಿ ಸ್ಮಾರ್ಟ್​ಫೋನ್​ ಕಟ್ಟಿ, ಬೋರ್ಡ್​ ಮೇಲೆ ಬರೆಯುತ್ತಿರುವುದು ಕಾಣುವಂತೆ ಮಾಡಿದ್ದಾರೆ. ಹ್ಯಾಂಗರ್​ನ ಇನ್ನೆರಡು ತುದಿಯನ್ನು ದಾರದಿಂದ ಕುರ್ಚಿಗೆ ಕಟ್ಟಿ ಅಲ್ಲಾಡದಂತೆ ಮಾಡಿದ್ದಾರೆ.

ಟ್ರೈಪಾಡ್​ ಇಲ್ಲದ ಕಾರಣ ಇಷ್ಟೆಲ್ಲ ಕಸರತ್ತು ಮಾಡಬೇಕಾಯಿತು ಎಂದಿರುವ ಮೌಮಿತಾ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದು 2 ಲಕ್ಷಕ್ಕೂ ಅಧೀಕ ವೀವ್ಸ್​ ಪಡೆದುಕೊಂಡಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್​ ಮಾಡಿ.....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net