

Gold Rates: ದಿನ ಕಳೆದಂತೆ ಚಿನ್ನದ ಬೆಲೆಗಳು ಆಗಸದತ್ತ ಮುಖಮಾಡಿರುವುದು ಸದ್ಯ ಚಿನ್ನದಂತ ಗ್ರಾಹಕರನ್ನು ಕಂಗಾಲಾಗಿಸಿದೆ. ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿರುವ ಚಿನ್ನವು ಇಂದೂ ಸಹ ಹೆಚ್ಚಾಗಿದೆ. ಈ ಮೂಲಕ ಮಧ್ಯಮ ವರ್ಗದ ಜನರ ಗೋಲ್ಡ್ ಖರೀದಿಯ ಕನಸನ್ನು ಕನಸಾಗಿಯೇ ಉಳಿಯುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಹೆಚ್ಚಾಗಲಿದೆ ಎಂದು ವರದಿಗಳು ಸೂಚಿಸಿವೆ.
ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,250 ರೂ. ಏರಿಕೆಯಾಗಿದ್ದು, 10 ಗ್ರಾಂ 22 ಕ್ಯಾರೆಟ್ ಬೆಲೆ 1,150 ರೂ. ಹೆಚ್ಚಾಗಿದೆ. ಇದರೊಟ್ಟಿಗೆ ಬೆಳ್ಳಿ ಬೆಲೆ ಕೂಡ ಏರಿದ್ದು, ಪ್ರತಿ ಕೆಜಿಗೆ 1000 ರೂ. ಜಾಸ್ತಿಯಾಗಿದೆ. ಹಾಗಿದ್ದರೆ, ದೇಶದ ಯಾವೆಲ್ಲ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಎಷ್ಟಾಗಿದೆ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.