

Gold Rates: ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರ ಇದೀಗ ಕಡಿಮೆಯಾಗಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ-ವಹಿವಾಟು ಯಥಾಸ್ಥಿತಿಗೆ ಮರಳಿದೆ. ಇದು ಪ್ರಸ್ತುತ ದಿನಗಳಲ್ಲಿ ಚಿನ್ನದ ದರ ಇಳಿಕೆಗೂ ಒಂದು ಬಲವಾದ ಕಾರಣವಾಗಿದೆ. ಕಳೆದ ಕೆಲವು ವಾರಗಳಲ್ಲಿ ಗಣನೀಯವಾಗಿ ಏರಿಕೆಗೊಂಡಿದ್ದ ಚಿನ್ನದ ಬೆಲೆ, ಇದೀಗ ಮಂದಗತಿಯಲ್ಲಿ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿದೆ. ಅದಕ್ಕೆ ಕಾರಣ ಚಿನ್ನದ ಬೆಲೆಯಲ್ಲಿ ಇಳಿಕೆ.
ಮಾರ್ಚ್ನಿಂದ ಮದುವೆ ಸೀಸನ್ ಆರಂಭಗೊಂಡಿದ್ದು, ಚಿನ್ನದ ಬೆಲೆ ಗಗನಕ್ಕೇರದಿರಲಿ ಎಂಬ ಆಶಯ ಗ್ರಾಹಕರದ್ದು. ಅಂತೆಯೇ ಚಿನ್ನದ ಬೆಲೆಯಲ್ಲಿ ದಿನ ಕಳೆದಂತೆ ಇಳಿಕೆ ಕಾಣುತ್ತಿರುವುದು ಇದೀಗ ಖರೀದಿದಾರರನ್ನು ಗೋಲ್ಡ್ ಮಳಿಗೆಗಳತ್ತ ಕೈಬೀಸಿ ಕರೆಯುತ್ತಿದೆ. ಹಾಗಿದ್ದರೆ, ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಾಗಿದೆ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಶುಕ್ರವಾರ (ಮೇ.23) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 380 ರೂ. ಇಳಿಕೆಯಾದರೆ, 22 ಕ್ಯಾರೆಟ್ ಚಿನ್ನದ ಬೆಲೆ 350 ರೂ. ಕಡಿಮೆಯಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಕುಸಿದಿದೆ. ಒಂದು ಕೆಜಿ ಬೆಳ್ಳಿ 1,000 ರೂ. ಇಳಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 23 ಡಾಲರ್ನಷ್ಟು ಹೆಚ್ಚಾಗಿ 3,320 ಡಾಲರ್ ವಹಿವಾಟು ನಡೆಸುತ್ತಿದೆ.
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್ಸೈಟ್ ದರ ಪರಿಶೀಲಿಸಿ,(ಏಜೆನ್ಸೀಸ್).